ನಟ ವಿಜಯ್ ಅವರನ್ನು ಚಿತ್ರರಂಗದಿಂದ ಫಿಲ್ಮ್ ಚೇಂಬರ್ ಬಹಿಷ್ಕಾರ ಹಾಕುತ್ತಾ..!?

ಜಿಮ್ ಟ್ರೈನರ್ ಹಾಗೂ ಬಾಡಿ ಬಿಲ್ಡರ್ ಮಾರುತಿ ಗೌಡ ಅವರ ಮೇಲೆ ನಟ ದುನಿಯಾ ವಿಜಯ್ ಹಲ್ಲೆ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ನಟ ದುನಿಯಾ ವಿಜಯ್ ಮೇಲೆ ಕಿಡ್ನ್ಯಾಪ್ ಮತ್ತು ಹಲ್ಲೆ ಪ್ರಕರಣಗಳು ದಾಖಲಾಗಿದೆ. ಹಲ್ಲೆಗೊಳಗಾದ ಮಾರುತಿ ಗೌಡ ಅವರ ಚಿಕ್ಕಪ್ಪ ಪಾನಿಪುರಿ ಕಿಟ್ಟಿ ಗೃಹ ಸಚಿವರೂ ಆಗಿರುವ ಡಿಸಿಎಂ ಪರಮೇಶ್ವರ್ ರನ್ನು ಭೇಟಿಯಾಗಿ ವಿಜಯ್ ವಿರುದ್ಧ ತಕ್ಕ ಕ್ರಮ ಕೈಗೊಳ್ಳಲು ಮನವಿಯನ್ನು ಕೂಡ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದು ಕಡೆ ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಸಂಬಂಧವಾಗಿ ಸಭೆ ನಡೆಯಲಿದ್ದು, ವಿಜಿ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆಯು ನಡೆಯಲಿದೆ. ಪಾನಿಪುರಿ ಕಿಟ್ಟಿ ನಟ ದುನಿಯಾ ವಿಜಯ್ ಅವರನ್ನ ಸಿನಿಮಾರಂಗದಿಂದ ನಿಷೇಧ ಮಾಡುವಂತೆ ಒತ್ತಾಯ ಮಾಡಿ ಫಿಲ್ಮ್ ಚೇಂಬರ್ ಗೆ ದೂರನ್ನು ಸಲ್ಲಿಸಿದ್ದರು. ಈ ಬಗ್ಗೆ ಚರ್ಚೆ ನಡೆಸಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ''ವಿಜಿ ಅವರನ್ನ ಚಿತ್ರರಂಗದಿಂದ ಬಹಿಷ್ಕಾರ ಮಾಡಲು ಸಾಧ್ಯವಿಲ್ಲ'' ಎಂದು ತಿಳಿಸಿದ್ದಾರೆ. "ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದು ಅವರ ವೈಯಕ್ತಿಕ ವಿಚಾರ ಆಗಿರುವುದರಿಂದ ಚಿತ್ರರಂಗದಿಂದ ಬಹಿಷ್ಕಾರ ಸಾಧ್ಯವಿಲ್ಲ'' ಎಂದು ಚಿನ್ನೇಗೌಡರು ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ.
Comments