ದಿ ಟೆರರಿಸ್ಟ್ ಸಿನಿಮಾದ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆ

ಸ್ಯಾಂಡಲ್ ವುಡ್ ನ ನಟಿ ತುಪ್ಪದ ಬೆಡಗಿ ರಾಗಿಣಿ ‘ತುಪ್ಪ ಬೇಕೆ ತುಪ್ಪಾ’ ಎಂಬ ಹಾಡಿನ ಮೂಲಕ ಪಡ್ಡೆ ಹುಡುಗರನ್ನು ತನ್ನತ್ತ ಸೆಳೆದ ನಟಿ. ಕನ್ನಡದ ಟಾಪ್ ನಟಿಯರಲ್ಲಿ ರಾಗಿಣಿ ಕೂಡ ಒಬ್ಬರು. ಆದರೆ ಈಗ ನಟಿ ರಾಗಿಣಿ ಟೆರರಿಸ್ಟ್ ಆಗಿರೋದನ್ನ ಕಂಡು ಎಲ್ಲರೂ ಬೆಚ್ಚುವಂತಾಗಿದೆ.
ಇತ್ತೀಚೆಗೆ ಸ್ಯಾಂಡಲ್ವುಡ್ ನಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಹೆಚ್ಚಾಗಿ ಮೂಡಿ ಬರುತ್ತಿವೆ. ಅದೇ ಸಾಲಿಗೆ ಈಗ ಮತ್ತೊಂದು ಚಿತ್ರವು ಕೂಡ ಸೇರಲಿದೆ. ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ., ನಿರ್ದೇಶಕ ಪಿ.ಸಿ.ಶೇಖರ್ ಅವರ ಹೊಸ ಚಿತ್ರದಲ್ಲಿ ರಾಗಿಣಿ ಅಭಿನಯಿಸಲಿದ್ದಾರೆ. ಹೊಸ ಚಿತ್ರಕ್ಕೆ ‘ದಿ ಟೆರರಿಸ್ಟ್’ ಎಂದು ನಾಮಕರಣ ಮಾಡಿದ್ದಾರೆ. ಸದ್ಯ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿವೆ. ರಾಗಿಣಿ ಬುರ್ಖಾ ತೊಟ್ಟು, ತಲೆಗೆ ಸ್ಕಾರ್ಫ್ ಹಾಕಿದ, ನಮಾಜ್ ಮಾಡುತ್ತಿರುವ ಮುಸ್ಲಿಂ ಯುವತಿಯಂತೆ ಕಾಣಿಸಿಕೊಂಡಿದ್ದಾರೆ. ಇದೀಗ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಅಭಿನಯದ ದಿ ಟೆರರಿಸ್ಟ್ ಸಿನಿಮಾದ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಪಿ.ಸಿ. ಶೇಖರ್ ನಿರ್ದೇಶನದ ದಿ ಟೆರರಿಸ್ಟ್ ಸಿನಿಮಾದ ಕಾಣಿಸದೆ ಸುರಿಯೋ ಕಣ್ಣೀರ ಕೊರಗು ಎಂಬ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಈ ಹಾಡಿಗೆ ಅನನ್ಯ ಭಟ್ ಧ್ವನಿ ನೀಡಿದ್ದಾರೆ. ಮಹೇಶ್ ರಾಜ್ ಹಾಡಿನ ಸಾಹಿತ್ಯ ಬರೆದಿದ್ದು, ವರ್ಮಾ ಸಂಗೀತ ನೀಡಿದ್ದಾರೆ.
Comments