ಇಂದು ವರನಟ ರಾಜ್ ಕುಮಾರ್ ಅಪಹರಣ ಪ್ರಕರಣದ ತೀರ್ಪು ಪ್ರಕಟ

ದಂತಚೋರ ವೀರಪ್ಪನ್ ಮತ್ತು ಆತನ ಸಂಗಡಿಗರು 18 ವರ್ಷಗಳ ಹಿಂದೆ ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರನ್ನು, ಅಪಹರಣ ಮಾಡಿದ್ದ ಪ್ರಕರಣ ಸಂಬಂಧವಾಗಿ ದಾಖಲಾಗಿದ್ದ ಕೇಸಿನ ತೀರ್ಪು ಇಂದು ಪ್ರಕಟವಾಗಲಿದೆ. ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ ನ್ಯಾಯಾಲಯ ಈ ತೀರ್ಪುನ್ನು ಪ್ರಕಟಿಸಲಿದೆ.
ಜುಲೈ 30, 2000ನೇ ಇಸವಿಯಲ್ಲಿ ತಮಿಳುನಾಡಿನ ಗಡಿಭಾಗದಲ್ಲಿರುವ ಗಾಜನೂರಿನ ಮನೆಯಿಂದ ವರನಟ ರಾಜ್‌ಕುಮಾರ್ ಅವರನ್ನು ದಂತಚೋರ ವೀರಪ್ಪನ್ ಅಪಹರಿಸಿದ್ದರು.. ಈ ಸಂಬಂಧವಾಗಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಗಲಾಟೆಗಳು ಆಗಿದ್ದವು. ರಾಜ್ ಕುಮಾರ್ ಅವರನ್ನು ಬಿಡಿಸಲು ಎರಡು ರಾಜ್ಯಗಳು ಭಾರೀ ಶ್ರಮವನ್ನು ವಹಿಸಿದ್ದವು. ಕೊನೆಯದಾಗಿ 108 ದಿನದ ಬಳಿಕ ರಾಜ್ ಕುಮಾರ್ ಅವರನ್ನು ವೀರಪ್ಪನ್ ಯಾವುದೇ ತೊಂದರೆ ಇಲ್ಲದೆ ಬಿಡುಗಡೆ ಮಾಡಿದ್ದರು. ಈ ವಿಷಯವಾಗಿ ದಂತ ಚೋರ ವೀರಪ್ಪನ್ ಸೇರಿದಂತೆ 8 ಜನರ ವಿರುದ್ಧ ಆರೋಪಟ್ಟಿಯನ್ನು ಸಿದ್ದ ಪಡಿಸಲಾಗಿತ್ತು..ಆದರೆ ವಿಚಾರಣೆ ವೇಳೆ ವೀರಪ್ಪನ್, ಸೇತುಕುಡಿ ಗೋವಿಂದನ್, ರಂಗಸಾಮಿ ಸಾವನ್ನಪ್ಪಿದ್ದರು. ಇನ್ನುಳಿದ 5 ಜನ ಹಾಲಿ ಪ್ರಕರಣ ಸಂಬಂಧವಾಗಿ ಜೈಲು ಸೇರಿದ್ದಾರೆ. ಇಂದು ಈ ವಿಚಾರವಾಗಿ ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ ನ್ಯಾಯಾಲಯ ಈ ತೀರ್ಪು ಪ್ರಕಟವಾಗಲಿದೆ.
Comments