‘ಯಜಮಾನ’ ನ ಫಸ್ಟ್‌ಲುಕ್ ರಿಲೀಸ್..!ನೀವೊಮ್ಮೆ ನೋಡಿ

24 Sep 2018 1:24 PM | Entertainment
556 Report

ಸ್ಯಾಂಡಲ್ ವುಡ್ ನ ಮೋಸ್ಟ್ ಎಕ್ಸ್’ಪೇಕ್ಷೆಷನ್ ಚಿತ್ರವಾದ ಚಾಲರಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ  ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಡಿ ಬೀಟ್ಸ್‌ನ ಯೂಟ್ಯೂಬ್ ಚಾನಲ್‌ನಲ್ಲಿ ಸ್ವತಃ ದರ್ಶನ್ ಅವರೇ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತಮ್ಮ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಲ್ಲಿ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಪಕ್ಕಾ ಮಾಸ್ ಲುಕ್‌ನಲ್ಲಿ ಚಿತ್ರದ ಮೊದಲ ಲುಕ್ ರಿಲೀಸ್ ಆಗಿದೆ. ಹೀಗಾಗಿ ಇಡೀ ಸಿನಿಮಾ ಹೀಗೆ ಕಮರ್ಷಿಯಲ್ಲಾಗಿರುತ್ತದೆ ಎಂಬುದು ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಅವರ  ಮಾತಾಗಿದೆ. ಈ ಚಿತ್ರ ಹೈ ಬಜೆಟ್ ಚಿತ್ರವಾಗಿದೆ. ದರ್ಶನ್, ರಶ್ಮಿಕಾ ಮಂದಣ್ಣ ಹಾಗೂ ತಾನ್ಯಾ ಹೋಪ್ ಜೋಡಿಯಾಗಿ ನಟಿಸಿರುವ 'ಯಜಮಾನ' ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತವಾದ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

Keywords:Yajamana firt look, Darshan.

Edited By

Manjula M

Reported By

Manjula M

Comments