ಜೈಲು ಪಾಲಾದ ‘ಜಯಮ್ಮನ ಮಗ’: ಕಂಬಿ ಹಿಂದೆ ಉಳಿದು ಬಿಡ್ತಾರಾ ‘ಕರಿಚಿರತೆ’
ನಟ ದುನಿಯಾ ವಿಜಯ್ ಬಾಡಿ ಬಿಲ್ಡರ್ ಮಾರುತಿ ಗೌಡ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದು ನಿನ್ನೆ ರಾತ್ರಿಯಿಡೀ ತಮ್ಮ ಸಹಚರರೊಂದಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆದರು.
ವಿಜಯ್ ರನ್ನು ಇಂದು ಖೈದಿಗಳ ಕೊಠಡಿಗೆ ವರ್ಗಾಯಿಸುವ ಸಾಧ್ಯತೆಯಿದೆ. ನಟ ದುನಿಯಾ ವಿಜಯ್ ಮೇಲೆ ಕಿಡ್ನ್ಯಾಪ್ ಮತ್ತು ಹಲ್ಲೆ ಪ್ರಕರಣಗಳು ದಾಖಲಾಗಿದೆ. ಇಂದು ಹಲ್ಲೆಗೊಳಗಾದ ಮಾರುತಿ ಗೌಡ ಚಿಕ್ಕಪ್ಪ ಪಾನಿಪುರಿ ಕಿಟ್ಟಿ ಗೃಹ ಸಚಿವರೂ ಆಗಿರುವ ಡಿಸಿಎಂ ಪರಮೇಶ್ವರ್ ರನ್ನು ಭೇಟಿಯಾಗಿ ವಿಜಯ್ ವಿರುದ್ಧ ತಕ್ಕ ಕ್ರಮ ಕೈಗೊಳ್ಳಲು ಮನವಿಯನ್ನು ಕೂಡ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದು ಕಡೆ ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಸಂಬಂಧವಾಗಿ ಸಭೆ ನಡೆಯಲಿದ್ದು, ವಿಜಿ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆಯು ನಡೆಯಲಿದೆ.
Comments