'ಗಂಡುಗಲಿ ಮದಕರಿ ನಾಯಕ' ಸಿನಿಮಾಗಾಗಿ ದರ್ಶನ್, ಸುದೀಪ್ ನಡುವೆ ಶುರುವಾಗಿದೆ ಸ್ಟಾರ್ ವಾರ್
ಚಿತ್ರರಂಗದಲ್ಲಿ ಸ್ಟಾರ್ ವಾರ್ ಗಳು ನಡೆಯುತ್ತಲೆ ಇರುತ್ತವೆ. ಇದೀಗ ಮತ್ತೊಮ್ಮೆ ಇಬ್ಬರು ಘಟಾನುಘಟಿ ಸ್ಟಾರ್‌ಗಳ ಅಭಿಮಾನಿಗಳು ಮುಸುಕಿನ ಯುದ್ಧಕ್ಕೆ ಸಿದ್ದರಾಗುತ್ತಿದೆ. ಇದೀಗ ವಾರ್ ಶುರುವಾಗಿರುವುದು 'ಗಂಡುಗಲಿ ಮದಕರಿ ನಾಯಕ' ಸಿನಿಮಾಕ್ಕಾಗಿ…
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಹೊಣೆ ಹೊತ್ತಿರುವ ಹಾಗೂ ದರ್ಶನ್ ನಟಿಸಲಿರುವ 'ಗಂಡುಗಲಿ ಮದಕರಿ ನಾಯಕ'ನ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಾರೆ ಎಂಬ ಸುದ್ದಿ ಬಂದಿದ್ದೇ ತಡ ಸುದೀಪ್ ಅಭಿಮಾನಿಗಳು ಮದಕರಿ ನಾಯಕನ ಪಾತ್ರ ಸುದೀಪ್ ಅವರಿಗೆ ಕೊಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬೇಡಿಕೆ ಶುರು ಮಾಡಿದ್ದರು. ಆದರೆ ಈ ಬೇಡಿಕೆಗೆ ದರ್ಶನ್ ಅಭಿಮಾನಿಗಳು ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ. 'ಗಂಡುಗಲಿ ಮದಕರಿ ನಾಯಕ' ಬಿಎಲ್ ವೇಣು ಅವರೇ ಬರೆದಿರುವ ಕಾದಂಬರಿಯಾಗಿದ್ದು, ಇದಕ್ಕೆ ಅವರೇ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆಯುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಮದಕರಿ ನಾಯಕನಿಗೆ ಸಂಭಾಷಣೆಯನ್ನು ಸಿದ್ದಪಡಿಸುತ್ತಿದ್ದಾರೆ ಬಿ ಎಲ್ ವೇಣು…ಈಗ ಮದಕರಿ ನಾಯಕನ ಪಾತ್ರವನ್ನು ತಾವೇ ಮಾಡುವಂತೆ ನಟ ಸುದೀಪ್ ಅವರ ಮೇಲೂ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ. ಈ ಮುಸುಕಿನ ಯುದ್ದ ಶುರುವಾಗುತ್ತಿದ್ದಂತೆಯೇ ದರ್ಶನ್ ಅಭಿಮಾನಿಗಳು ಮದಕರಿ ನಾಯಕ ಪಾತ್ರ ಬಾಸ್ ಮಾಡಿದರೇನೇ ಸರಿ ಎನ್ನುತ್ತಿದ್ದಾರೆ. ಚರ್ಚೆಗಳು ಜೋರಾಗಿ ಸಾಗುತ್ತಿವೆ. ಈ ವಾರ್ ಎಲ್ಲಿಗೆ ಬಂದು ಕೊನೆಗೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
Comments