ವೈರಲ್ ಆಯ್ತು ಬಿಗ್ ಬಾಸ್ 6 ಸ್ಪರ್ಧಿಗಳ ಹೆಸರು..! ಯಾರ್ ಯಾರ್ ಇದ್ದಾರೆ ಲೀಸ್ಟ್’ನಲ್ಲಿ ನೀವೆ ನೋಡಿ..
ಕಿರುತೆರೆಯಲ್ಲಿಯೇ ಅತಿದೊಡ್ಡ ಹಾಗೂ ಜನಪ್ರಿಯ ರಿಯಾಲಿಟಿ ಷೋಗಳಲ್ಲಿ ಒಂದಾದ ಬಿಗ್’ಬಾಸ್ ಸೀಜನ್ 6 ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ 5 ಆವೃತ್ತಿಯನ್ನು ಮುಗಿಸಿ ಈಗ 6ನೇ ಆವೃತ್ತಿಗೆ ಬಿಗ್ ಬಾಸ್ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಿಗ್‍ಬಾಸ್ ಕಾರ್ಯಕ್ರಮಕ್ಕಾಗಿ ಈಗಾಗಲೇ ಮೊದಲ ಪ್ರೋಮೋ ಶೂಟ್ ಕೂಡ ಮುಗಿಸಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದರಿಂದ ಇನ್ನೋವೇಟಿವ್ ಫಿಲ್ಮ್ ಸಿಟಿನಲ್ಲಿ ಬಿಗ್‍ಬಾಸ್ ಮನೆ ನಿರ್ಮಾಣವಾಗಿದೆ. ಈ ಬಾರಿ ಬಿಗ್‍ಬಾಸ್ ಶೋನಲ್ಲಿ ಭಾಗವಹಿಸುವ 6 ಸ್ಪರ್ಧಿಗಳ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆರ್.ಜೆ ರ್ಯಾಪಿಡ್ ರಶ್ಮಿ, ಇವರಿಗೆ ಬಿಗ್‍ಬಾಸ್ ಮನೆಗೆ ಹೋಗುವಂತೆ ಆಫರ್ ಬಂದಿದೆ ಅನ್ನೋ ಮಾಹಿತಿ ಹರಿದಾಡುತ್ತಿದೆ. ಚಂದನ್ ಶೆಟ್ಟಿಯ `ಟಕೀಲಾ’ ಸಾಂಗಿನಲ್ಲಿ ಸೊಂಟ ಬಳುಕಿಸಿರುವ ಶಾಲಿನಿ, ಸ್ಯಾಂಡಲ್‍ವುಡ್ ನಟಿ ಭಾವನ ಮತ್ತು ಸುಮನ್ ರಂಗನಾಥ್ ಕೂಡ ಈ ಬಾರಿ ಬಿಗ್‍ಬಾಸ್ ಮನೆಗೆ ಹೋಗುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಾರಿ ಕುರಿ ಪ್ರತಾಪ್‍ರನ್ನ ಬಿಗ್‍ಬಾಸ್ ಮನೆಗೆ ಕಳುಹಿಸುವ ಫ್ಲಾನ್ ಮಾಡಿದ್ದಾರಂತೆ ಬಿಗ್ ಬಾಸ್. ಇತ್ತ ಬಿಗ್‍ಬಾಸ್ ಶೋನಲ್ಲಿ ಪ್ರೇಮ್ ಕುಮಾರಿ ಕೂಡ ಇರುತ್ತಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಶುಭಪುಂಜಾ, ನಟ ಟೆನ್ನಿಸ್ ಕೃಷ್ಣ, ಪುಟ್ಟಗೌರಿ ಖ್ಯಾತಿಯ ಶಿವರಂಜಿನಿ, ನಟ ಅನಿರುದ್ದ್, ಮುಂಗಾರು ಮಳೆ ನೇಹಾಶೆಟ್ಟಿ, ಸಿಲ್ಲಿಲಲ್ಲಿ ರವಿಶಂಕರ್, ಸರಿಗಮಪ ಚೆನ್ನಪ್ಪ, ನಟ ಅಚ್ಯುತ್ ಕುಮಾರ್, ಕಿರಿಕ್ ಪಾರ್ಟಿ ಚಂದನ್ ಆಚಾರ್, ನಟಿ ಮಯೂರಿ, ತಿಥಿ ಸಿನಿಮಾ ಖ್ಯಾತಿಯ ಅಭಿ, ಡಾ. ಶಂಕರೇಗೌಡ ಇವರೆಲ್ಲರ ಹೆಸರು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ. ಆದರೆ 6ನೇ ಆವೃತ್ತಿಯಲ್ಲಿ ಭಾಗವಹಿಸುವ ಸ್ಪರ್ಧಿಗಳ ಹೆಸರು ಅಧಿಕೃತವಾಗಿ ಲಭ್ಯವಾಗಿಲ್ಲ.
Comments