ಪಟ್ಟಣಕ್ಕೆ ಎಂಟ್ರಿ ಕೊಟ್ಟ ಹಳ್ಳಿ ಹೈದರು..! ಸಖತ್ ಆಗಿದೆ 'ಹಳ್ಳಿ ಹೈದ ಪ್ಯಾಟೆಗೆ ಬಂದ' ಪ್ರೋಮೋ..!! ನೀವೊಮ್ಮೆ ನೋಡಿ
ಕಿರುತೆರೆಯಲ್ಲಿ ರಿಯಾಲಿಟಿ ಷೋಗಳಿಗೇನು ಕಡಿಮೆ ಇಲ್ಲ. ಇದೀಗ ಹಳ್ಳಿ ಹೈದ ಪ್ಯಾಟೆಗ್ ಬಂದ ಸೀಸನ್ 3 ರಿಯಾಲಿಟಿ ಶೋ ಮತ್ತೆ ಪ್ರಾರಂಭವಾಗಲಿದೆ. ಇದೇ 23 ರಿಂದ ಸಂಜೆ 6 ಗಂಟೆಗೆ ಅದ್ದೂರಿ ಕಾರ್ಯಕ್ರಮದ ಮೂಲಕ ಹಳ್ಳಿ ಹೈದರನ್ನು ಬರ ಮಾಡಿಕೊಳ್ಳಲಾಗುತ್ತದೆ.
ರಾಜ್ಯದ ಬೇರೆ ಬೇರೆ ಭಾಗದ ಹಳ್ಳಿಗಳಿಂದ ಹಳ್ಳಿ ಹೈದರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟು 12 ಮಂದಿ ಭಾಗವಹಿಸಲಿದ್ದಾರೆ. ನಟಿ ಮಾಲಾಶ್ರೀ, ಹರಿಪ್ರಿಯಾ ಹಾಗೂ ಐಂದ್ರಿತಾ ರೇ ಹಳ್ಳಿ ಹೈದರನ್ನು ಇದೇ ಭಾನುವಾರ ಸಂಜೆ 6 ಗಂಟೆಗೆ ಬರ ಮಾಡಿಕೊಳ್ಳಲಿದ್ದಾರೆ. ಈಗಾಗಲೇ ಹಳ್ಳಿ ಹೈದ ಪ್ಯಾಟೆಗ್ ಬಂದ ಸೀಸನ್ 3 ರಿಯಾಲಿಟಿ ಶೋ ನ ಪ್ರೋಮೋವನ್ನು ಬಿಡಲಾಗಿದ್ದು ಇದು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಅಕುಲ್ ಬಾಲಾಜಿ ನಿರೂಪಣೆ ಹೊಣೆ ಹೊತ್ತಿದ್ದಾರೆ.
Comments