ಕಿಚ್ಚ ನಿಂದ ಅಭಿಮಾನಿಗಳಿಗೆ ಸರ್ಪ್ರೈಸಿಂಗ್ ಗಿಫ್ಟ್..!
ಅಪ್ಪನ ಜೊತೆ ಸೆಲ್ಫಿ ತೆಗೆದುಕೊಂಡು ಅದನ್ನು ವಾಟ್ಸಾಪ್ ಮಾಡಿದರೆ ಅವರಿಗೆ ಅಭಿನಯಚಕ್ರವರ್ತಿ ನಟ ಕಿಚ್ಚ ಸುದೀಪ್ ಕಡೆಯಿಂದ ಬಂಪರ್ ಉಡುಗೊರೆ ಸಿಗಲಿದೆ.
ಅಂಬರೀಶ್ ಹಾಗೂ ಕಿಚ್ಚ ಸುದೀಪ್ ಅಭಿನಯಿಸಿದ 'ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ' ಇದೇ ತಿಂಗಳು 27ರಂದು ಬಿಡುಗಡೆಯಾಗಲಿದ್ದು, ಹೀಗಾಗಿ ಚಿತ್ರತಂಡ ಅಭಿಮಾನಿಗಳಿಗೆ ತಮ್ಮ ತಂದೆ ಜೊತೆಯಿರುವ ಫೋಟೋ ವಾಟ್ಸಾಪ್ ಮೂಲಕ ಕಳುಹಿಸಿ ತಮ್ಮ ಜೊತೆ ಚಿತ್ರವನ್ನು ವೀಕ್ಷಿಸುವಂತೆ ಬಂಪರ್ ಆಫರ್ ನೀಡಿದೆ. ಅಭಿಮಾನಿಗಳು ಅಪ್ಪನ ಜೊತೆ ತೆಗೆದುಕೊಂಡ ಸೆಲ್ಫಿ ಫೋಟೋವನ್ನು 96637 50657 ನಂಬರಿಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು. ವಾಟ್ಸಾಪ್ ಮೂಲಕ ಕಳುಹಿಸಿದ ಫೋಟೋಗಳಲ್ಲಿ 250 ಫೋಟೋವನ್ನು ಆಯ್ಕೆ ಮಾಡಲಾಗುತ್ತದೆಯಂತೆ. ಇದರಲ್ಲಿ ಆಯ್ಕೆಯಾದ ಅಪ್ಪ- ಮಗ ಅಥವಾ ಮಗಳು ಚಿತ್ರತಂಡ ಹಾಗೂ ಸುದೀಪ್ ಜೊತೆ ಚಿತ್ರ ನೋಡಬಹುದು. ಹಾಗೂ ಕಿಚ್ಚ ಸುದೀಪ್ ಅವರ ಆಟೋಗ್ರಾಫ್ ಕೂಡ ಸಿಗಲಿದೆ.
keywords: sudeep kiccha, kiccha sudeep, Ambrish,
Comments