ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶ್ರದ್ಧಾ ಶ್ರೀನಾಥ್ ..!
ಸ್ಯಾಂಡಲ್ ವುಡ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಚಿತ್ರದ ನಾಯಕಿ ನಟಿ ಶ್ರದ್ಧಾ ಶ್ರೀನಾಥ್ ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಗೆ ಭೇಟಿ ನೀಡಿದ್ದರು, ಈ ಮೊದಲು ಶಾಲೆಯಿಂದ ರಾಮೋಜಿ ಫಿಲ್ಮ್ ಸಿಟಿಗೆ ಹೋಗಿದ್ದ ಶ್ರದ್ಧಾ ಒಬ್ಬ ನಟಿಯಾಗಿ ಹೋಗಿ ಖುಷಿ ಪಟ್ಟಿದ್ದಾರೆ.
ರುಸ್ತುಂ ಸಿನಿಮಾಗಾಗಿ ರಾಮೋಜಿ ಫಿಲಂ ಸಿಟಿಯಲ್ಲಿ ನಡೆದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಶ್ರದ್ಧಾ ಶ್ರೀನಾಥ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.. ಈಗ ನನಗೆ ಪ್ರಾಪರ್ ಹಿರೋಯಿನ್ ಅನ್ನಿಸುತ್ತದೆ,. ನನಗೆ ಇಲ್ಲಿ ತುಂಬಾ ವಿಭಿನ್ನ ಅನುಭವವಾಯಿತು, ಎಂದು ಹೇಳಿರುವ ಶ್ರದ್ಧಾ ಕರ್ನಾಟಕದಲ್ಲೂ ಒಂದು ರಾಮೋಜಿ ಸಿಟಿ ಬೇಕು ಎಂದು ಹೇಳಿದ್ದಾರೆ. ರವಿವರ್ಮ ನಿರ್ದೇಶನದ ರುಸ್ತುಂ ಚಿತ್ರದಲ್ಲಿ ಶ್ರದ್ಧಾ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ, ಈ ತಿಂಗಳ ಕೊನೆಯಲ್ಲಿ ನನ್ನ ಭಾಗದ ಚಿತ್ರಿಕರಣ ಮುಗಿಯಲಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ ಎಂದು ತಿಳಿಸಿದ್ದಾರೆ.
Comments