ರಾಯಣ್ಣ ಹಾಗೂ ದುರ್ಯೋಧನನ ನಂತರ ಮತ್ತೊಂದು ಐತಿಹಾಸಿಕ ಪಾತ್ರದಲ್ಲಿ ಡಿ-ಬಾಸ್

ಸ್ಯಾಂಡಲ್ ವುಡ್’ನಲ್ಲಿ ಐತಿಹಾಸಿಕ ಚಿತ್ರಗಳು ಬರುತ್ತಲೆ ಇವೆ. ಆದರೆ ಅಂತಹ ಪಾತ್ರಗಳು ಒಪ್ಪುವುದು ಕೆಲವರಿಗೆ ಅಷ್ಟೆ.. ಅದರಲ್ಲಿ ದರ್ಶನ್ ಕೂಡ ಒಬ್ಬರು.. ಐತಿಹಾಸಿಕ ಪಾತ್ರಗಳು ಚಾಲೆಂಜಿಂಗ್ ಸ್ಟಾರ್ ಗೆ ಸಖತ್ತಾಗಿಯೇ ಒಪ್ಪುತ್ತವೆ. ಹಾಗಾಗಿ ಕನ್ನಡಚಿತ್ರರಂಗದಲ್ಲಿ ಐತಿಹಾಸಿಕ ಪಾತ್ರ ಎಂದರೆ ನೆನಪಾಗೋದು ಡಿ-ಬಾಸ್
ಮತ್ತೊಂದು ಐತಿಹಾಸಿಕ ಕತೆಯೊಂದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಹಿ ಮಾಡಿದ್ದು, ಶೀಘ್ರದಲ್ಲಿಯೇ ದರ್ಶನ್ ಅವರ ವೀರಮದಕರಿಯ ನಾಯಕರಾಗಿ ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗಾಗಿಯೇ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು, ಕಾದಂಬರಿ ಆಧಾರಿತ ಅಪೂರ್ವ ಐತಿಹಾಸಿಕ ಚಿತ್ರ ನಿರ್ಮಾಣದ ಸಾಹಸಕ್ಕೆ ಕೈ ಹಾಕಿದ್ದಾರೆ, ಈಗಾಗಲೇ ಚಿತ್ರಕ್ಕೆ ದರ್ಶನ್ ಅವರು ಗ್ರೀನ್ ಸಿಗ್ನಲ್ ಕೂಡ ನೀಡಿದ್ದಾರೆ. ಈ ಹಿಂದೆ ಸಂಗೊಳ್ಳಿ ರಾಯಣ್ಣನಾಗಿ ತೆರೆಯ ಮೇಲೆ ಘರ್ಜಿಸಿದ್ದ ದರ್ಶನ್ ,ಕುರುಕ್ಷೇತ್ರದಲ್ಲಿ ದುರ್ಯೋಧನ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಕುರುಕ್ಷೇತ್ರ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದ್ದು, ಈ ನಡುವಲ್ಲೇ ದರ್ಶನ್ ಅವರು ಮದಕರಿ ನಾಯಕನಾಗಿ ಅಭಿಮಾನಿಗಳ ಮುಂದೆ ಬರಲು ಸಿದ್ಧವಾಗುತ್ತಿದ್ದಾರೆ. ಒಟ್ಟಾರೆಯಾಗಿ ದರ್ಶನ್ ಅವರು ಐತಿಹಾಸಿಕ ಪಾತ್ರಕ್ಕೆ ಹೇಳಿ ಮಾಡಿಸಿದ ರೀತಿ ಇದ್ದಾರೆ ಎನ್ನುವುದು ಅಭಿಮಾನಿಗಳ ಮಾತು.
Comments