ತೆಲುಗು ಚಿತ್ರದ ಆಡಿಯೋ ಲಾಂಚ್ ಫಂಕ್ಷನ್ ನಲ್ಲಿ ಕನ್ನಡದಲ್ಲೇ ಮಾತನಾಡಿದ ಕರ್ನಾಟಕದ ಕ್ರಶ್ ರಶ್ಮಿಕಾ..!

ಸ್ಯಾಂಡಲ್ ವುಡ್ ನಲ್ಲಿ ಕರ್ನಾಟಕದ ಕ್ರಶ್ ಎಂದೆ ಫೇಮಸ್ ಆಗಿರುವ ರಶ್ಮಿಕಾ ಮಂದಣ್ಣ ಇತ್ತಿಚಿಗೆ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಇದೀಗ ಮತ್ತೆ ರಶ್ಮಿಕಾ ಮಂದಣ್ಣ ಹೆಸರು ಕೇಳಿ ಬರತ್ತಿದೆ. ಮತ್ತೆ ಏನಾಯ್ತು ಅಂತ ಯೋಚನೆ ಮಾಡುತ್ತಿದ್ದೀರಾ.. ಮುಂದೆ ಓದಿ
ಪರಭಾಷಾ ಸಿನಿಮಾಗಳಿಗಾಗಿ ಕನ್ನಡ ಮರೆತಿದ್ದಾರೆ ಎಂದು ಟ್ರೋಲ್ ಗೆ ಒಳಗಾಗಿದ್ದ ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ತೆಲುಗು ಚಿತ್ರವೊಂದರ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಾತನಾಡಿದ್ದಾರೆ. ರಶ್ಮಿಕಾ ತೆಲುಗು ಸಿನಿಮಾಗಳಿಗಾಗಿ ಕನ್ನಡ ಮರೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿತ್ತು.. ಆದರೆ ತೆಲುಗಿನ ದೇವದಾಸ್ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಾತನಾಡಿ ಟ್ರೋಲ್ ಮಾಡುವವರ ಬಾಯಿ ಮುಚ್ಚಿಸಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ದೇವದಾಸ್ ಆಡಿಯೋ ಫಂಕ್ಷನ್ ನಲ್ಲಿ ಎಲ್ಲರಿಗೂ ನಮಸ್ಕಾರ ಎಂದು ರಶ್ಮಿಕಾ ಕನ್ನಡದಲ್ಲೇ ಮಾತನಾಡಿದ್ದಾರೆ. ಇನ್ನು ದೇವದಾಸ್ ಚಿತ್ರದಲ್ಲಿ ನಾಗರ್ಜುನ್, ನಾನಿ, ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು, ಇದೇ ಸೆಪ್ಟೆಂಬರ್ 27 ಕ್ಕೆ ಚಿತ್ರ ತೆರೆ ಮೇಲೆ ಬರಲಿದೆ.
Comments