ಸ್ಯಾಂಡಲ್ ವುಡ್’ನಲ್ಲೆ ಹೊಸ ದಾಖಲೆ ಬರೆದ ‘ದಿ ವಿಲನ್’
ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರವಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಜೋಗಿ ಪ್ರೇಮ್ ನಿರ್ದೇಶನದ ಅದ್ಧೂರಿ ವೆಚ್ಚದ ಚಿತ್ರ ದಿ ವಿಲನ್ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಪ್ರೇಮ್ ನಿರ್ದೇಶನದಲ್ಲಿ ಬಂದಿರುವ ವಿಲನ್ ಕನ್ನಡ ಸಿನಿಮಾ ಈಗಾಗಲೇ ಬಿಡುಗಡೆಗೂ ಮೊದಲೇ ವಿತರಣೆಯ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟವಾಗಿದೆಯಂತೆ.
ದಿ ವಿಲನ್ ಚಿತ್ರದ ವಿತರಣೆಯ ಹಕ್ಕು ರಾಜ್ಯದಲ್ಲಿ 50 ಕೋಟಿಗೆ ಮಾರಾಟವಾಗಿದೆಯಂತೆ. ಒಟ್ಟು ನಾಲ್ಕು ಜನ ಈ ಸಿನಿಮಾದ ಹಕ್ಕುಗಳನ್ನು ಪಡೆದುಕೊಂಡಿದ್ದು ನಿರ್ಮಾಪಕರಾದ ಜಾಕ್ ಮಂಜು ಬೆಂಗಳೂರು,ತುಮಕೂರು, ಕೋಲಾರದ ಚಿತ್ರ ವಿತರಣೆಯ ಹಕ್ಕನ್ನು ಪಡೆದುಕೊಂಡಿದ್ದಾರೆ.. ಎನ್. ಕುಮಾರ್ ಅವರು ಮಂಡ್ಯ,ಮೈಸೂರು,ಕೂರ್ಗ್ ಮತ್ತು ಹಾಸನದ ಹಕ್ಕನ್ನು ಪಡೆದುಕೊಂಡಿದ್ದಾರೆ. ಹುಬ್ಬಳ್ಳಿ-ಧಾರವಾಡದ ವಿತರಣೆಯ ಹಕ್ಕೂ ಕೂಡ ಇವರ ಬಳಿಯೇ ಇದೆ. ಹೈದ್ರಾಬಾದ್ ಕರ್ನಾಟಕದ ವಿತರಣೆಯ ಹಕ್ಕನ್ನು ರಾಜಶೇಖರಪ್ಪ ಮತ್ತು ಶಿವಮೊಗ್ಗದ ಹಕ್ಕುಗಳನ್ನು ಪೈ ಅವರು ಪಡೆದುಕೊಂಡಿದ್ದಾರೆ. ಇವೆಲ್ಲ ಹಕ್ಕುಗಳ ಒಟ್ಟು ಮೊತ್ತ 50 ಕೋಟಿ ಆಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಮುಂದಿನ ತಿಂಗಳು ಅಕ್ಟೋಬರ್ 18 ರಂದು ಬಿಡುಗಡೆಯಾಗುವ ವಿಲನ್ ಚಿತ್ರ ದೇಶ ವಿದೇಶಗಳಲ್ಲಿ 1 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ. ಬಾಚಲಿದೆ ಎನ್ನುವ ಮಾತುಗಳು ಗಾಂಧಿನಗರದಿಂದ ಕೇಳಿ ಬರುತ್ತಿದೆ. ಸಿನಿ ರಸಿಕರು ಈ ಚಿತ್ರಕ್ಕಾಗಿ ತುಂಬಾ ಕುತೂಹಲದಿಂದ ಕಾಯುತ್ತಿದ್ದರು. ತೆರೆಗೆ ಬಂದ ಮೇಲೆ ಚಿತ್ರ ಯಾವ ರೀತಿ ಇದೆ ಎಂಬುದನ್ನ ಕಾದು ನೋಡಬೇಕಿದೆ.
Comments