ಮರಳಿ ಬಾರದ ಲೋಕಕ್ಕೆ ಪಯಣ ಬೆಳಸಿದ ಹಿರಿಯ ನಟ ಬ್ರಹ್ಮಾವರ್

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟರಾದ ಸದಾಶಿವ್ ಬ್ರಹ್ಮಾವರ್ ಅವರು ಬಾರದ ಲೋಕಕ್ಕೆ ಪಯಣ ಬೆಳಸಿದ್ದಾರೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಮಧ್ಯಾಹ್ನ ಅವರು ಕೊನೆಯುಸಿರೆಳೆದಿದ್ದು, ಗುರುವಾರ ಎಲ್ಲರಿಗೂ ತಿಳಿದಿದೆ.
ಸಾಯುವ ಮೊದಲು ಸದಾಶಿವ್ ಅವರು ನನ್ನ ಸಾವಿನ ಸುದ್ದಿ ನನ್ನ ಕುಟುಂಬದವರಿಗೆ ಬಿಟ್ಟು ಬೇರೆಯವರಿಗೆ ತಿಳಿಯ ಬಾರದು ಎಂದಿದ್ದರು ಎಂದು ಹೇಳಲಾಗುತ್ತಿದೆ. ಬನಶಂಕರಿಯ ಚಿತಗಾರದಲ್ಲಿ ಅವರ ಅಂತ್ಯಕ್ರಿಯೆಯನ್ನು ಮಾಡಲಾಗಿದೆ. ಕಳೆದ ವರ್ಷ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ಬ್ರಹ್ಮಾವರ್ ಅವರು ಕುಮಟಾದಲ್ಲಿ ತಿರುಗಾಡುತ್ತಿದ್ದರು. ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ ನಟರಾದ ಶಿವರಾಜ್ ಕುಮಾರ್, ಸುದೀಪ್ ಮೊದಲಾದವರು ನೆರವಾಗಿದ್ದರು.ಆ ಬಳಿಕ ಕುಟುಂಬದವರೊಂದಿಗೆ ವಾಸವಾಗಿದ್ದರು. 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಸದಾಶಿವ್ ನಟಿಸಿದ್ದರು. ಕೆಲ ಧಾರಾವಾಹಿಗಳಲ್ಲೂ ಭಾವನಾತ್ಮಕವಾದ ಪಾತ್ರಗಳನ್ನು ಮಾಡಿದ್ದರು. ಆದರೆ ಇದೀಗ ಅನಾರೋಗ್ಯದಿಂದ ಬಾರದ ಲೋಕಕ್ಕೆ ಪಯಣ ಬೆಳಸಿದ್ದಾರೆ.
Comments