ರಿಯಲ್ ಸ್ಟಾರ್ ಕೈ ಮೇಲೆ ಡಿಂಪಲ್ ಕ್ವೀನ್ ಟ್ಯಾಟು..!

ಮೊನ್ನೆಯಷ್ಟೆ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಐ ಲವ್ ಯೂ' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ಚಿತ್ರದ ಪೋಸ್ಟರ್ ತುಂಬಾನೇ ಕುತೂಹಲ ಮೂಡಿಸುತ್ತಿದೆ.
ಉಪ್ಪಿಯ ಕೈಯಲ್ಲಿ ನಟಿಮಣಿಯ ಟ್ಯಾಟು ಇದೆ.. ಹೌದು, ಉಪೇಂದ್ರ ತಮ್ಮ ಕೈ ಮೇಲೆ ರಚಿತಾ ರಾಮ್ ಅವರ ಟ್ಯಾಟು ಹಾಕಿಸಿಕೊಂಡು ಗಮನವನ್ನು ಸೆಳೆದಿದ್ದಾರೆ, ಆದರೆ ಇದು ತಾತ್ಕಾಲಿಕ ಟ್ಯಾಟು ಎಂದು ಹೇಳಲಾಗುತ್ತಿದೆ. ಚಿತ್ರಕ್ಕಾಗಿಈ ತರ ಟ್ಯಾಟೂ ಹಾಕಿಸಿಕೊಂಡಿದ್ದರಾ ಅಥವಾ ಅಭಿಮಾನಿಗಳು ಈ ರೀತಿ ಕ್ರಿಯೇಟ್ ಮಾಡಿದ್ದಾರಾ ಎಂಬುದು ಸದ್ಯದ ಕುತೂಹಲದ ಪ್ರಶ್ನೆಯಾಗಿದೆ. ಐ ಲವ್ ಯೂ ಸಿನಿಮಾದಲ್ಲಿ ರಚಿತಾ ರಾಮ್ ಜೊತೆಗೆ ಸೋನು ಗೌಡ ಕೂಡ ಚಿತ್ರದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗುವ ಈ ಸಿನಿಮಾದಲ್ಲಿ ಉಪೇಂದ್ರ ಮೂರು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ, ಕನಕ ಸಿನಿಮಾದ ನಂತರ ಆರ್ ಚಂದ್ರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
Comments