ಹೆಸರು ಬದಲಾಯಿಸಿಕೊಂಡ ಸ್ಯಾಂಡಲ್’ವುಡ್ ನಟಿ ‘ಮಾನ್ವಿತಾ ಹರೀಶ್’
ಸ್ಯಾಂಡಲ್ ವುಡ್ ನಲ್ಲಿರುವ ಸಾಕಷ್ಟು ನಟ ನಟಿಯರ ರಿಯಲ್ ನೇಮ್ ಗೊತ್ತೆ ಇರುವುದಿಲ್ಲ. ಏಕೆಂದರೆ ಬಣ್ಣದ ಜಗತ್ತಿಗೆ ಬಂದ ಮೇಲೆ ಕೆಲವರು ತಮ್ಮ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಕೆಲವು ಸೆಲಬ್ರೆಟಿಗಳು ಅದಕ್ಕೆ ಲಕ್ ಕಾರಣ ಅಂತಾರೆ , ಮತ್ತೆ ಕೆಲವರು ನ್ಯೂಮರಾಲಜಿ ಅಂತಾರೆ. ಆದರೆ ಹೆಸರು ಬದಲಾಯಿಸಿಕೊಳ್ಳುವುದು ಮಾತ್ರ ಫ್ಯಾಷನ್ ಆಗಿಬಿಟ್ಟಿದೆ. ಇದೀಗ ಇದೇ ಸಾಲಿಗೆ ಟಗರು ಪುಟ್ಟಿ ಮಾನ್ವಿತಾ ಹರೀಶ್ ಕೂಡ ಸೇರಿಕೊಳ್ಳುತ್ತಾರೆ.
ಮಾನ್ವಿತಾ ಹರೀಶ್ ಈಗ ಮಾನ್ವಿತಾ ಕಾಮತ್ ಆಗಿದ್ದಾರೆ. ಅರೇ ಹೌದಾ.. ಅಯ್ಯೋ ಮಾನ್ವಿತಾಗೆ ಮದುವೆ ಆಗೋಯ್ತಾ ಅಂತ ಕೆಲವರು ಗುಸು ಪಿಸು ಅಂತಿದ್ದರು. ಆದರೆ ನಟಿ ಮಾನ್ವಿತಾ ತಮ್ಮ ಹೆಸರು ಬದಲಾಯಿಸಿದ್ದು ಮದುವೆಯಾಗಿ ಅಲ್ಲ ಬದಲಾಗಿ ಅವರ ತಂದೆಯ ಹೆಸರು ಹರೀಶ್ ಕಾಮತ್. ಇಷ್ಟು ದಿನ 'ಮಾನ್ವಿತಾ ಹರೀಶ್' ಎಂದು ಕರೆಯಿಸಿಕೊಳ್ಳುತ್ತಿದ್ದ ಈಕೆ ಇದೀಗ ತಮ್ಮ ಕುಟುಂಬದ ಸರ್ ನೇಮ್ 'ಕಾಮತ್' ಎಂಬುದನ್ನು ತಮ್ಮ ಹೆಸರಿನ ಕೊನೆಗೆ ಸೇರಿಸಿಕೊಂಡಿದ್ದಾರೆ ಅಷ್ಟೇ. ಇದು ತಿಳಿದ ಮೇಲೆ ಅಭಿಮಾನಿಗಳು ಸಧ್ಯ ನಮ್ಮ ಹುಡುಗಿಗೆ ಇನ್ನೂ ಮದುವೆಯಾಗಿಲ್ಲ ಎಂಬ ಖುಷಿಯಲ್ಲಿದ್ಧಾರೆ.
Comments