ರಿಮೇಕ್ ಆಗಲಿದೆ ಕನ್ನಡದ 'ಒಂದು ಮೊಟ್ಟೆಯ ಕಥೆ' ಸಿನಿಮಾ

ಬಣ್ಣದ ಲೋಕದಲ್ಲಿ ಪ್ರತಿಯೊಂದು ವಿಷಯವು ಕೂಡ ತುಂಬಾ ಇರ್ಪಾಟೆಂಟ್. ಅದೆಷ್ಟೋ ಸಿನಿಮಾಗಳು ಕನ್ನಡದಿಂದ ಪರಭಾಷೆಗೆ ಪರಭಾಷೆಯಿಂದ ಕನ್ನಡಕ್ಕೆ ರಿಮೇಕ್ ಆಗುತ್ತಲೇ ಇರುತ್ತವೆ. ಆದರೆ ಇದೀಗ ರಿಮೇಕ್ ನ ಸರದಿ ಬಂದಿರೋದು ಕನ್ನಡ ಸಿನಿಮಾವಾದ ಒಂದು ಮೊಟ್ಟೆಯ ಕಥೆ ಗೆ. ಕನ್ನಡದ ಸಾಕಷ್ಟು ಸಿನಿಮಾಗಳು ಬೇರೆ ಬೇರೆ ಭಾಷೆಗೆ ರಿಮೇಕ್ ಆಗುತ್ತಿವೆ. ಇದೀಗ ಈಗ 'ಒಂದು ಮೊಟ್ಟೆಯ ಕಥೆ' ಕೂಡ ಸೇರಿಕೊಳ್ಳಲಿದೆ.
ನಿರ್ದೇಶಕರಾದ ಪವನ್ ಕುಮಾರ್ 'ಯೂ ಟರ್ನ್' ಸಿನಿಮಾವನ್ನು ತೆಲುಗಿನಲ್ಲಿ ರಿಮೇಕ್ ಮಾಡಿದ್ದರು. ಕಳೆದ ವಾರ ತಾನೇ ರಿಲೀಸ್ ಆಗಿದ್ದ ಈ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಇದರಿಂದ ನಿರ್ದೆಶಕರಾದ ಪವನ್’ಗೂ ಕೂಡ ಮತ್ತಷ್ಟು ದೈರ್ಯ ಹೆಚ್ಚಾಗಿದೆ. ಅದೇ ಗೆಲುವಿನ ಖುಷಿಯಲ್ಲಿರುವ ಅವರು ಕನ್ನಡ ಸಿನಿಮಾದ 'ಒಂದು ಮೊಟ್ಟೆಯ ಕಥೆ' ಸಿನಿಮಾವನ್ನು ಕೂಡ ಟಾಲಿವುಡ್ ನಲ್ಲಿ ಮಾಡುವ ಮನಸ್ಸು ಮಾಡಿದ್ದಾರೆ ಕನ್ನಡದ 'ಒಂದು ಮೊಟ್ಟೆಯ ಕಥೆ' ರಿಮೇಕ್ ಬಗ್ಗೆ ಇತ್ತೀಚಿಗಷ್ಟೆ ನಿರ್ದೇಶಕ ಪವನ್ ಮಾತನಾಡಿದ್ದಾರೆ. ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿದ್ದ ಈ ಸಿನಿಮಾವನ್ನು ಪವನ್ ನಿರ್ಮಾಣ ಮಾಡಿದ್ದರು. ಅದೇ ರೀತಿ ಈಗ ತೆಲುಗಿನಲ್ಲಿ ಮತ್ತೊಬ್ಬ ನಿರ್ದೇಶಕರಲ್ಲಿ ಚಿತ್ರವನ್ನು ಮಾಡಿಸುವ ಪ್ಲಾನ್ ಪವನ್ ಕುಮಾರ್ ಅವರದ್ದಾಗಿದೆ. ಆದರೆ ಈ ಚಿತ್ರದ ರಿಮೇಕ್ ಬಗ್ಗೆ ಯಾವುದೇ ಮಾತುಕಥೆ ಅಂತಿಮವಾಗಿಲ್ಲ ಎಂದು ತಿಳಿಸಿದ್ದಾರೆ.
Comments