'ದಿ ವಿಲನ್' ತೆರೆಗೆ ಬಂದು ಅಬ್ಬರಿಸಲು ಡೇಟ್ ಫಿಕ್ಸ್

ಸ್ಯಾಂಡಲ್ ವುಡ್'ನ ಬಹು ನಿರೀಕ್ಷಿತ ಚಿತ್ರವಾದ ದಿ ವಿಲನ್ ತೆರೆಗೆ ಬರಲು ಸಜ್ಜಾಗಿದೆ. ಅನೇಕ ವಾದ ವಿವಾದಗಳ ನಂತರ ಎಲ್ಲದಕ್ಕೂ ತೆರೆ ಎಳೆದು ಇದೇ ತಿಂಗಳು ತೆರೆ ಮೇಲೆ ಅಬ್ಬರಿಸಲು ಬರುತ್ತಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣ, ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ದಿ ವಿಲನ್ ಸಿನಿಮಾ ರಿಲೀಸ್ ಆಗೋದು ಪಕ್ಕಾ ಆಗಿದ್ದು, ಗೌರಿ ಗಣೇಶ ಹಬ್ಬಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಇದೇ ಸೆಪ್ಟೆಂಬರ್ ನಲ್ಲೇ ಸಿನಿಮಾ ರಿಲೀಸ್ ಆಗೋದು ಕನ್ ಫರ್ಮ್ ಆಗಿದೆ. ಈ ಬಾರಿಯ ಗಣೇಶ ಹಬ್ಬದಿಂದಲೇ ದಿ ವಿಲನ್ ಸಿನಿಮಾದ ಹವಾ ಶುರುವಾಗಲು ಸಜ್ಜಾಗಿದೆ. ಸೆಪ್ಟೆಂಬರ್ 3 ನೇ ವಾರ ಅಂದ್ರೆ ಸೆಪ್ಟೆಂಬರ್ 21 ಕ್ಕೆ ಸಿನಿಮಾ ತೆರೆಗೆ ಬರುವುದು ಬಹುತೇಕ ಕನ್ ಫರ್ಮ್ ಆಗಿದ್ದು, ಸಿನಿಮಾ ರಿಲೀಸ್ ಗೂ ಒಂದು ವಾರ ಮೊದಲೆ ಅಂದರೆ ಗೌರಿ ಗಣೇಶ ಹಬ್ಬದಿಂದಲೇ ಸಿನಿಮಾದ ಟಿಕೆಟ್'ಗಳು ನಿಗದಿತ ಥಿಯೇಟರ್ ಗಳಲ್ಲಿ ಆನ್ ಲೈನ್ ನಲ್ಲಿ ಲಭ್ಯವಾಗಲಿವೆ ಎಂದು ಚಿತ್ರತಂಡ ತಿಳಿಸಿದೆ.
Comments