ಚಿಕ್ಕಣ್ಣನ ಹೊಸ ಗೆಟಪ್ ವೈರಲ್..ಹೇಗಿದೆ ಚಿಕ್ಕಣ್ಣನ ಹೊಸ ಗೆಟಪ್..!?

ಚಂದನವನದಲ್ಲಿ ಯಾವುದೆ ಒಂದು ಸಿನಿಮಾ ಯಶಸ್ವಿಯಾಗಬೇಕು ಅಂದರೆ ಹೀರೋ, ಹೀರೋಯಿನ್ ಕಥೆ ಎಷ್ಟು ಮುಖ್ಯವೋ ಹಾಸ್ಯನಟರು ಕೂಡ ಅಷ್ಟೆ ಮುಖ್ಯ..ಹಾಸ್ಯ ನಟರ ಪೈಕಿ ಇತ್ತಿಚಿಗೆ ಟ್ರೆಂಡಿಂಗ್ ಇರೋರು ಅಂದರೆ ಅದು ಚಿಕ್ಕಣ್ಣ, ತೆರೆ ಮೇಲೆ ಚಿಕ್ಕಣ್ಣ ಬಂದ್ರೆ ಸಾಕು ಹೊಣ್ಣೆ ಹುಣ್ಣಾಗುವಷ್ಟು ನಗಿಸುವುದರಲ್ಲಿ ನೋ ಡೌಟು, ಅವರ ಹಾವ ಭಾವ, ಮಾತಾಡುವ ಶೈಲಿ ಎಲ್ಲವೂ ಕೂಡ ಅಭಿಮಾನಿಗಳನ್ನು ಅಟ್ರ್ಯಾಕ್ಟ್ ಮಾಡುತ್ತದೆ.
ಸ್ಯಾಂಡಲ್ ವುಡ್ ನಿರ್ಮಾಪಕರಾದ ಕೆ.ಮಂಜು ಪುತ್ರನಾದ ಶ್ರೇಯಸ್ ಅಭಿನಯದ ಪಡ್ಡೆಹುಲಿ ಚಿತ್ರದಲ್ಲಿ ಹಾಸ್ಯ ನಟ ಚಿಕ್ಕಣ್ಣ ಅಭಿನಯಿಸುತ್ತಿದ್ದು, ಇದೀಗ ಅವರ ಹೊಸ ಗೆಟಪ್ ಸಖತ್ ವೈರಲ್ ಆಗಿದೆ.ಚಿಕ್ಕಣ್ಣ ಅವರ ಕಲರ್ ಕಲರ್ ಹೇರ್ ಎಲ್ಲರ ಗಮನ ಸೆಳೆಯುತ್ತಿದೆ. ತೇಜಸ್ವಿನಿ ಬ್ಯಾನರ್ ಅಡಿ ರಮೇಶ್ ರೆಡ್ಡಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಗುರುದೇಶಪಾಂಡೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಶ್ರೇಯಸ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸುತ್ತಿದ್ದಾರೆ.ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಮತ್ತು ಸುಧಾರಾಣಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಈ ಇನ್ನೂ ಚಿತ್ರದಲ್ಲಿ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಚಿಕ್ಕಣ್ಣ ಮತ್ತಷ್ಟು ಮೋಡಿ ಮಾಡಲು ರೆಡಿಯಾಗಿದ್ದಾರೆ.
Comments