ಸ್ಯಾಂಡಲ್’ವುಡ್ ಚಿತ್ರ ತಾರೆಯರ ಸಿಸಿಎಲ್’ಗೆ ಕ್ಷಣಗಣನೆ
ಸ್ಯಾಂಡಲ್ ವುಡ್ ನಲ್ಲಿ ಇದೀಗ ಸಿಸಿಎಲ್ ಹವಾ ಜೋರಾಗಿಯೇ ಇದೆ. ಸ್ಯಾಂಡಲ್ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಂದಾಳತ್ವದಲ್ಲಿ ಕರ್ನಾಟಕ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ಚಾಲನೆಯನ್ನು ನೀಡಿರೋ ವಿಚಾರ ಎಲ್ಲರಿಗೂ ತಿಳಿದೆ. ಈಗ ಸ್ಯಾಂಡಲ್’ವುಡ್ ಸೆಲೆಬ್ರಿಟಿ ಲೀಗ್ ನಲ್ಲಿ ಭಾಗವಹಿಸಲು ಸೆಲೆಬ್ರಿಟಿ ಕ್ರಿಕೆಟ್ ಲೀಗ್’ನ ಎಲ್ಲಾ ತಂಡಗಳು ಭರ್ಜರಿ ತಯಾರಿಯನ್ನು ನಡೆಸುತ್ತಿವೆ. ಅದರಲ್ಲೂ ಕಿಚ್ಚ ಸುದೀಪ್ ಈ ಟೂರ್ನಿಯ ಬಗ್ಗೆ ಸಾಕಷ್ಟು ಕೂತುಹಲ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ..
ಸೆಪ್ಟೆಂಬರ್ 8 ಮತ್ತು 9ರಂದು ನಡೆಯಲಿರುವ ಸಿಸಿಎಲ್’ಗೆ ಈಗಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಿಮ ಹಂತದ ಸಿದ್ಧತೆಗಳು ನಡಿಯುತ್ತಿವೆ. ಸ್ಯಾಂಡಲ್ವುಡ್ ನ ಅನೇಕ ನಾಯಕರು ಲೀಡ್ ಮಾಡಲಿರೋ ತಂಡಗಳಲ್ಲಿ ಅಂತಾರಾಷ್ಟ್ರೀಯ ಆಟಗಾರರು ಕೂಡ ಪಾಲ್ಗೊಳ್ಳುತ್ತಿರುವುದರಿಂದ ಟೂರ್ನಿಮೆಂಟ್ ನ ಖ್ಯಾತಿ ಮತ್ತಷ್ಟು ಹೆಚ್ಚಾಗಲಿದೆ. ಈ ಕ್ರಿಕೆಟ್ ಟೂರ್ನಿಗೆ ಕ್ರಿಕೆಟ್ ಪ್ರೇಮಿಗಳ ಬೆಂಬಲವು ಇದೆ. ಅಷ್ಟೆ ಅಲ್ಲದೆ ಜೊತೆಗೆ ತಮಿಳು, ತೆಲುಗು, ಹಿಂದಿ, ಮತ್ತು ಮಲಯಾಳಂ ಸಿನಿಮಾ ರಂಗದ ಗಣ್ಯರು ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
Comments