ರಾಕಿಂಗ್ ಸ್ಟಾರ್’ಗೆ ಮರಿ ರಾಕಿಂಗ್ ಸ್ಟಾರ್ ಬೇಡ್ವಂತೆ..!! ಮತ್ತೆ..!?
ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಜೊತೆ ಜೊತೆಯಲ್ಲಿಯೇ ವೈಜಿಎಫ್ ಆಗುತ್ತಿರುವುದು ಎಲ್ಲರಿಗೂ ಗೊತ್ತಿರುವೇ ವಿಷಯವೇ.. ಸಾಮಾಜಿಕ ಜಾಲತಾಣದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ಜನಿಸಲಿರುವ ಮಗುವಿನ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಅಭಿಮಾನಿಗಳು ಮರಿ ರಾಕಿಂಗ್ ಸ್ಟಾರ್ ಎಂದೇ ನಾಮಕಾರಣ ಮಾಡಿಬಿಟ್ಟಿದ್ದಾರೆ. ಆದರೆ ಯಶ್ ಮಾತ್ರ ತಮಗೆ ಹೆಣ್ಣು ಮಗು ಬೇಕು ಎಂದು ಹೇಳಿಕೊಂಡಿದ್ದಾರೆ.
ಈ ವಿಷಯವಾಗಿ ಮಾಧ್ಯಮದವರ ಜೊತೆ ಮಾತನಾಡಿದ ಯಶ್, ನಮ್ಮ ಮನೆಯಲ್ಲಿ ಎಲ್ಲ ಗಂಡು ಮಕ್ಕಳೆ ಇರೋದು, ನನ್ನ ತಂಗಿಗೂ ಗಂಡು ಮಗು ಇದೆ. ಆದ್ದರಿಂದ ನನಗೆ ಹೆಣ್ಣು ಮಗು ಬೇಕು ಎಂದು ತಮ್ಮ ಆಸೆಯನ್ನು ಹೇಳಿಕೊಂಡಿದ್ದಾರೆ.. ಸಾಮಾನ್ಯವಾಗಿ ಹೆಣ್ಣು ಗರ್ಭಿಣಿಯಾಗಿರುವ ಸಮಯದಲ್ಲಿ ನೂರಾರು ಕನಸುಗಳನ್ನು ಕಾಣುತ್ತಿರುತ್ತಾರೆ. ಆ ಎಲ್ಲಾ ಬಯಕೆಗಳನ್ನು ಈಡೇರಿಸುವುದು ಗಂಡನಾದವನ ಕರ್ತವ್ಯವಾಗಿರುತ್ತದೆ. ಇಂತಹ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಕಾಲು ನೋವು, ಬೆನ್ನು ನೋವು ಬರುತ್ತವೆ. ಅವರಿಗೆ ನೋವು ಬಂದಾಗ ಕಾಲು ಒತ್ತಬೇಕು. ಇವೆಲ್ಲವನ್ನೂ ಗಂಡನಾಗಿ ಮಾಡಬೇಕು ಅದು ಅವನ ಜವಾಬ್ದಾರಿ ಜೊತೆಗೆ ಖುಷಿಯಾಗಿ ಮಾಡಬೇಕು ಎಂದು ತಿಳಿಸಿದರು. ಕೇವಲ ನಾಯಕನಟನಾಗಿ ಅಷ್ಟೆ ಅಲ್ಲದೆ ಹೆಂಡತಿಯನ್ನು ಹೇಗೆ ನೋಡಿಕೊಳ್ಳಬೇಕು ಅಂದು ತಿಳಿಸಿ ಹೆಂಡತಿಗೆ ತಕ್ಕ ಗಂಡ ಅನ್ನೋದನ್ನ ಯಶ್ ಪ್ರೂ ಮಾಡಿದ್ದಾರೆ.
Comments