ಉತ್ತರ ಕರ್ನಾಟಕದ ಹಳ್ಳಿಯನ್ನು ದತ್ತು ಪಡೆಯಲು ಮುಂದಾದ ‘ಅಯೋಗ್ಯ’ ನಾಯಕ

ಸ್ಯಾಂಡಲ್ ವುಡ್’ನಲ್ಲಿ ಸ್ಟಾರ್ ನಟರು ಹಳ್ಳಿಗಳನ್ನು ದತ್ತು ಪಡೆಯುವುದು ಕಾಮನ್ ಆಗಿಬಿಟ್ಟಿದೆ. ಇದೀಗ ನಟ ನೀನಾಸಂ ಕೂಡ ಹಳ್ಳಿಯನ್ನು ದತ್ತು ಪಡೆಯಲು ಮುಂದಾಗಿದ್ದಾರೆ. ನಟ ನೀನಾಸಂ ಸತೀಶ್ ಅಯೋಗ್ಯ ಚಲನಚಿತ್ರದಿಂದ ಸ್ಪೂರ್ತಿಗೊಂಡು ಉತ್ತರ ಕರ್ನಾಟಕದಲ್ಲಿ ಹಿಂದುಳಿದ ಹಳ್ಳಿಯೊಂದನ್ನು ದತ್ತು ಪಡೆಯಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಧಾರವಾಡದಲ್ಲಿ ಮಾತನಾಡಿದ ಸತೀಶ್ ನೀನಾಸಂ ಅವರು, ಈಗಾಗಲೇ ಮಂಡ್ಯ ಜಿಲ್ಲೆಯ ಹುಲ್ಲೆಗಾಲ್ ಗ್ರಾಮ ದತ್ತು ಪಡೆದಿದ್ದೇನೆ. ಮುಂದಿನ ಚಿತ್ರ ಮುಗಿದ ನಂತರ ಉತ್ತರ ಕರ್ನಾಟಕದ ಹಳ್ಳಿಯನ್ನು ದತ್ತು ಪಡೆಯುತ್ತೇನೆ ಎಂದು ತಿಳಿಸಿದ್ದಾರೆ. ಭಿಕ್ಷೆ ಬೇಡಿಯಾದರೂ ಹಣ ತಂದು ಹಳ್ಳಿಯನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದು ತಿಳಿಸಿದರು.. ನಾನು ಹಳ್ಳಿಯನ್ನು ದತ್ತು ತೆಗೆದುಕೊಂಡ ನಂತರ ಅದನ್ನು ನೋಡಿಯಾದರೂ ಉಳ್ಳವರು ಮತ್ತು ಕೋಟ್ಯಧೀಶ್ವರರು ಮುಂದೆ ಬರಲಿ, ಉತ್ತರ ಕರ್ನಾಟಕದಲ್ಲಿ ಯಾವ ಹಳ್ಳಿ ಅತ್ಯಂತ ಹಿಂದುಳಿದಿದೆ ಎಂದು ಜನರೇ ತಿಳಿಸಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಎಲ್ಲರೂ ಮನಸ್ಸು ಮಾಡಿದರೆ ಹಳ್ಳಿಗಳ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.
Comments