ಇಳಿ ವಯಸ್ಸಿನಲ್ಲೂ ಯುವ ನಟರನ್ನು ನಾಚಿಸುವಂತೆ ಸ್ಟೆಪ್ ಹಾಕಿದ ಅಂಬಿ

ಚಂದನವನದಲ್ಲಿ ಅಂದಿನಿಂದ ಇಂದಿನವರೆಗೂ ತನ್ನ ರೆಬಲ್ ಅನ್ನು ಉಳಿಸಿಕೊಂಡು ಬಂದಿರುವ ನಟ ಎಂದರೆ ಅದು ರೆಬಲ್ ಸ್ಟಾರ್ ಅಂಬರೀಶ್. ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರವಾದ ರೆಬಲ್ ಸ್ಟಾರ್ ಅಂಬರೀಶ್ ಮತ್ತು ಅಭಿನಯ ಚರ್ಕವರ್ತಿ ಕಿಚ್ಚ ಸುದೀಪ್ ನಟನೆಯ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಜಲೀಲ ಸಾಂಗ್ ರಿಲೀಸ್ ಆಗಿದ್ದು, ಸಿನಿಮಾ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ,.
ಎಸ್…ಚಿತ್ರತಂಡದಿಂದ ಜಲೀಲಾ ಸಾಂಗ್ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು. ಅಂಬಿ ತನ್ನ ಖದರ್ ಅನ್ನು ಸಖತ್ತಾಗಯೇ ತೋರಿಸಿದ್ದಾರೆ. ಇಳಿ ವಯಸ್ಸಿನಲ್ಲಿ ಅಂಬಿ ಯಂಗ್ ನಟರನ್ನು ನಾಚಿಸುವಂತೆ ಸ್ಟೆಪದ ಹಾಕಿದ್ದಾರೆ. ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ಅಂಬರೀಶ್, ಸುದೀಪ್, ಶ್ರುತಿ ಹರಿಹರನ್, ಸುಹಾಸಿನಿ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ಗುರುದತ್ ಗಾಣಿಕ ನಿರ್ದೇಶಿಸಿದ್ದು, ಜಾಕ್ ಮಂಜು ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ.. ಅರ್ಜುನ್ ಜನ್ಯ ಅವರ ಸಂಗೀತ ಈ ಚಿತ್ರಕ್ಕಿದೆ. ಇನ್ನೂ ತೆರೆ ಮೇಲೆ ಈ ಚಿತ್ರ ಯುಆವ ರೀತಿ ಮೂಡಿಬರುತ್ತೆ ಅನ್ನೋದನ್ನ ಕಾದು ನೋಡಲೆ ಬೇಕು,
Comments