ಅಣ್ಣಾವ್ರ ಅಭಿಮಾನಿ ಎಂದ ಕೂಡಲೇ ಕನ್ನಡದ ನಟನಿಗೆ ತಮಿಳು ಚಿತ್ರರಂಗ ಮಾಡಿದ್ದೇನು ಗೊತ್ತಾ..!?

ಯಾರನ್ನಾದರೂ ನಿಮಗೆ ಯಾವ ಹೋರೋ ಇಷ್ಟ ಅಂದರೆ ಫಸ್ಟ್ ಹೇಳೋದು ನಾನು ಅಣ್ಣಾವ್ರ ಅಭಿಮಾನಿ ಅಂತಾ.. ಸಾಕಷ್ಟು ಜನ ಹೇಳೊದೆ ಹಾಗೆ. ಏಕೆಂದರೆ ಅಣ್ಣಾವ್ರ ಅಭಿನಯ ಅಂದರೆ ಅಷ್ಟು ಇಷ್ಟ ನಮ್ಮ ಜನತೆಗೆ, ಆದರೆ ನಾನು ಅಣ್ಣಾವ್ರ ಅಭಿಮಾನಿ, ನನ್ನ ತಾಯಿ ಕಾವೇರಿ ಅಂದಿದ್ದಕ್ಕೆ ನಟ ಯೋಗಿ ತಮಿಳು ಚಿತ್ರದ ಅವಕಾಶಗಳಿಂದ ವಂಚಿತರಾಗಿದ್ದಾರೆ.
ಕನ್ನಡದ ನಟ ಯೋಗಿ ತಮಿಳಿನ ಪಾರ್ತಿಬನ್ ಕಾದಲ್ ಚಿತ್ರಕ್ಕೆ ನಾಯಕನಾಗಿ ಸೆಲೆಕ್ಟ್ ಆಗಿದ್ದರು. ಈ ಚಿತ್ರದ ಮೋಷನ್ ಪೋಸ್ಟರ್ ಕೂಡ ಚೆನ್ನೈನಲ್ಲಿ ಬಿಡುಗಡೆಯಾಗಿತ್ತು. ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಮುಗಿದ ಮೇಲೆ ತಮಿಳು ಪತ್ರಕರ್ತರು ಸಿನಿಮಾ ತಂಡವನ್ನು ಪ್ರಶ್ನೆ ಮಾಡಲು ಮುಂದಾಗಿದ್ದಾರೆ. ಕಾವೇರಿ ನಮಗೆ ಸಿಗಬೇಕೋ ನಿಮಗೆ ಸಿಗಬೇಕೋ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಯೋಗಿ ಅವರು, ನಮಗೆ ನೀರಿಲ್ಲ ನಿಮಗೆ ಬೇಕು ಅಂದ್ರೆ ಹೇಗೆ, ಮಂಡ್ಯ ಅಂತಾ ಊರಿದೆ ಅಲ್ಲಿ ಜನಎಷ್ಟು ಕಷ್ಟಪಡುತ್ತಾರೆ ಎಂದು ನೀವೇ ನೋಡಿ ಎಂದು ಉತ್ತರಿಸಿದರು.ನಂತರ ರಾಜ್ ಕುಮಾರ್ ಇಷ್ಟನೋ ಅಥವಾ ರಜನಿಕಾಂತ್ ಇಷ್ಟನೋ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಯೋಗಿ ನನಗೆ ಅಣ್ಣಾವ್ರೇ ಇಷ್ಟ ಎಂದು ಉತ್ತರಿಸಿದ್ದಾರೆ. ಈ ವಿಷಯಕ್ಕಾಗಿ ಪಾರ್ತಿಬನ್ ಕಾದಲ್ ಸಿನಿಮಾ ದಿಂದ ಯೋಗಿ ಅವರಿಗೆ ಗೇಟ್ ಪಾಸ್ ನೀಡಿದ್ದಾರೆ. ಅಷ್ಟೇ ಅಲ್ಲದೇ ಈ ರೀತಿ ಮಾತನಾಡಬಾರದಿತ್ತು ಎಂದು ನಿರ್ಮಾಪಕರು ಬುದ್ದಿ ಮಾತು ಹೇಳಿ ಯೋಗಿಯನ್ನು ಹೊರದಬ್ಬಿದ್ದಾರೆ ಎಂದು ಹೇಳಲಾಗುತ್ತಿದೆ.
Comments