ಇದು ‘ಸೀತರಾಮ ಕಲ್ಯಾಣ’ ಅಲ್ಲ ‘ನಿಖಿಲ್ ಕುಮಾರಸ್ವಾಮಿ ಕಲ್ಯಾಣ’..! ನಿಖಿಲ್’ಗೆ ಕೂಡಿಬಂತು ಕಂಕಣ ಭಾಗ್ಯ..!! ಹುಡುಗಿ ಯಾರು ಗೊತ್ತಾ..!?

ಚಂದನವನಕ್ಕೆ ಜಾಗ್ವಾರ್ ಸಿನಿಮಾದ ಮೂಲಕ ಎಂಟ್ರಿ ಕೊಟ್ಟ ನಿಖಿಲ್ ಕುಮಾರಸ್ವಾಮಿ ಅದೊಂದೆ ಸಿನಿಮಾದಲ್ಲಿ ಸಾಕಷ್ಟು ಹೆಸರನ್ನು ಮಾಡಿದರು, ಕುರುಕ್ಷೇತ್ರ ಹಾಗೂ ಸೀತಾರಾಮ ಕಲ್ಯಾಣ ಕಲ್ಯಾಣ ಸಿನಿಮಾದ ಕೆಲಸಗಳು ನಡೆಯುತ್ತಿವೆ.. ಈಗಾಗಲೇ ಆ ಸಿನಿಮಾಗಳ ಟೀಸರ್ ಮತ್ತು ಟ್ರೈಲರ್ ನಿಂದಲೆ ಮತ್ತಷ್ಟು ಅಭಿಮಾನಿಗಳಿಗೆ ಹತ್ತಿರವವಾಗಿದ್ದಾರೆ. ಆದರೆ ಇದೀಗ ನಿಖಿಲ್ ಕ್ಯಲಾಣಕ್ಕೆ ಸದ್ದಿಲ್ಲದೆ ತಯಾರು ನಡೆಯುತ್ತಿದೆ.
ಹೆಚ್ ಡಿ ಕುಮಾರಸ್ವಾಮಿ ಪುತ್ರನಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಆಂಧ್ರದ ವಿಜಯವಾಡದ ಉದ್ಯಮಿ ಪುತ್ರಿ ಜೊತೆ ಮದುವೆ ನಿಶ್ಚಯವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಮದುವೆ ಕುರಿತು ವಿಜಯವಾಡದಲ್ಲಿ ಎಚ್’ಡಿಕೆ ಮಾತುಕತೆಯನ್ನು ನಡೆಸುತ್ತಿದ್ದಾರೆ. ಇನ್ನೂ ಆಂದ್ರದ ಪ್ರತಿಷ್ಟಿತ ಕುಟುಂಬದ ಜೊತೆ ಸಂಬಂಧವನ್ನು ಸಿಎಂ ಕುಮಾರಸ್ವಾಮಿಯವರು ಬೆಳೆಸುತ್ತಿದ್ದಾರೆ. ಪವರ್ ಪ್ರಾಜೆಕ್ಟ್ ನ ಮುಖ್ಯಸ್ಥರಾದ ರಘುರಾಮ ಕೃಷ್ಣಂ ರಾಜು ಅವರ ಪುತ್ರಿಯ ಜೊತೆ ವಿವಾಹದ ಮಾತುಕತೆ ನಡೆಯುತ್ತಿದೆ. ಈ ಮಾತುಕತೆಯ ಸಂದರ್ಭದಲ್ಲಿ ಲಗಡ ಪಾಟಿ ರಾಜು ಗೋಪಾಲ್ ಆಂಧ್ರ ಸಿಎಂ ಚಂದ್ರನಾಯ್ಡು ಕೂಡ ಇದ್ದರು ಎನ್ನಲಾಗುತ್ತಿದೆ.
Comments