ಗೀತಾ ಗೋವಿಂದಂ ಸಿನಿಮಾದ ಲಿಪ್‍ಲಾಕ್ ಸೀನ್’ಗೆ ಕತ್ತರಿ: ಕೊನೆಗೂ ಸೀಕ್ರೆಟ್ ರಿವೀಲ್ ಮಾಡಿದ ರಶ್ಮಿಕಾ

ಕರ್ನಾಟಕದ ಕ್ರಶ್, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇತ್ತಿಚಿಗೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಗೀತಾ ಗೋವಿಂದಂ ಸಿನಿಮಾದಲ್ಲಿರುವ ರೋಮ್ಯಾನ್ಸ್ ಸೀನ್’ಗಳಿಂದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ನಿಶ್ಚಿತಾರ್ಥ ಆದ ಮೇಲೆ ಈಗೆಲ್ಲಾ ಮಾಡಬಾರದು ಎಂದು ಅಭಿಮಾನಿಗಳು ಗರಂ ಆಗಿದ್ದರು. ಆದರೆ ಕೊನೆಗೂ ತಮ್ಮ ಗೀತಾ ಗೋವಿಂದಂ ಚಿತ್ರದಲ್ಲಿ ಲಿಪ್‍ಲಾಕ್ ಸೀನ್ ಏಕೆ ಇರಲಿಲ್ಲ ಎಂಬುದರ ಸೀಕ್ರೆಟ್ ಅನ್ನು ರಶ್ಮಿಕಾ ರಿವೀಲ್ ಮಾಡಿದ್ದಾರೆ.
ರಶ್ಮಿಕಾ ಅಭಿನಯಿಸಿದ ಗೀತಾ ಗೋವಿಂದಂ ಚಿತ್ರ ತೆರೆ ಕಾಣುವ ಮೂರು ದಿನದ ಹಿಂದೆ ವಿಜಯ್ ಜೊತೆಗಿನ ಲಿಪ್‍ಲಾಕ್ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. 40 ಸೆಕೆಂಡ್ ಇರುವ ಈ ದೃಶ್ಯ ನೋಡಿ ಕೆಲವರು ಖುಷಿಪಟ್ಟರೆ, ಮತ್ತೆ ಹಲವರು ರಶ್ಮಿಕಾ ವಿರುದ್ದ ಕಿಡಿಕಾರಿದ್ದರು. ಈ ಹಿನ್ನಲೆಯಲ್ಲಿ ವಿಜಯ್ ದೇವರಕೊಂಡ ಜೊತೆಗಿನ ಲಿಪ್‍ಲಾಕ್ ದೃಶ್ಯಗಳಿಗೆ ಕತ್ತರಿ ಹಾಕುವಂತೆ ನಿರ್ದೇಶಕ ಮತ್ತು ನಿರ್ಮಾಪಕರ ಮೇಲೆ ಸ್ವತಃ ರಶ್ಮಿಕಾ ಅವರೇ ಒತ್ತಡ ಹೇರಿದ್ದರಂತೆ. ಹೀಗಾಗಿಯೇ ಚಿತ್ರ ಬಿಡುಗಡೆಯಾದ ಮೇಲೆ ಆ ದೃಶ್ಯ ಗೀತ ಗೋವಿಂದಂ ಚಿತ್ರದಲ್ಲಿ ಕಾಣಿಸಲಿಲ್ಲ. ನನ್ನ ಮಾತಿಗೆ ಸಿನಿಮಾ ನಿರ್ದೇಶಕ ಪರಶುರಾಮ್ ಕೂಡ ಕೈ ಜೋಡಿಸಿದ್ರು ಅಂತ ರಶ್ಮಿಕಾ ಮಂದಣ್ಣ ಖಾಸಹಿ ವಾಹಿನಿಯೊಂದರಲ್ಲಿ ತಿಳಿಸಿದ್ದಾರೆ
Comments