ಮದುವೆ ನಂತ್ರ ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ ಕೊಟ್ಟ ನಿಧಿ ಸುಬ್ಬಯ್ಯ..!!

ಚಂದನವನದ ಚೆಲುವೆಯರಲ್ಲಿ ಒಬ್ಬರು ನಿಧಿ ಸುಬ್ಬಯ್ಯ.. ನಿಧಿ ನಟಿಸುತ್ತಿದ್ದು ಬೆರಳೆಣಿಕೆಯಷ್ಟು ಸಿನಿಮಾವಾದ್ರೂ ಕೂಡ ಪಡ್ಡೆ ಹುಡುಗರ ಹಾರ್ಟಿನಲ್ಲಿ ಜಾಗ ಮಾಡಿಕೊಂಡಿದ್ದಾರೆ.ನಿಧಿ ಸುಬ್ಬಯ್ಯ ನಟಿಸಿದ್ದ ಪಂಚರಂಗಿ, ಕೃಷ್ಣನ್ ಮ್ಯಾರೆಜ್ ಸ್ಟೋರಿ ಸೇರಿದಂತೆ ಹಲವು ಸಿನಿಮಾಗಳು ಸಿನಿರಸಿಕರನ್ನು ರಂಜಿಸಿದ್ದವು.ಇತ್ತಿಷಿಗಷ್ಟೆ ಮದುವೆಯಾಗಿದ್ದ ನಿಧಿ ಸಿನಿಮಾರಂಗದಿಂದ ದೂರ ಉಳಿದುಬಿಟ್ಟಿದ್ದರು.
ವಿವಾಹದ ನಂತರ ಚಿತ್ರರಂಗದಿಂದ ಬಹುತೇಕ ದೂರ ಉಳಿದಿದ್ದ ನಟಿ ನಿಧಿ ಸುಬ್ಬಯ್ಯ ಮತ್ತೆ ಸ್ಯಾಂಡಲ್‌ವುಡ್ ಗೆ ರೀ ಎಂಟ್ರಿ ಕೊಡ್ತಿದ್ದಾರೆ. ಮೈಲಾಪುರ ಚಿತ್ರದಲ್ಲಿ ನಿಧಿ ಸುಬ್ಬಯ್ಯ ನಟಿಸುತ್ತಿದ್ದು ಈ ಚಿತ್ರದ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ.. ಇಂದಿನ ಕಾಲದಲ್ಲಿ ಯುವತಿಯರು ಲವ್ ಫೇಲ್ಯೂರ್‌ನಿಂದ ದಾರಿ ತಪ್ಪುತ್ತಾರೆ. ಅವರಿಗೆ ಉತ್ತಮವಾದ ಸಂದೇಶ ನೀಡುವ ಹಾಡಿದು. ಡಾನ್ಸ್ ನಡುವೆ ಡೈಲಾಗ್‌ಗಳೂ ಇವೆ. ನನಗೆ ಕಥೆ, ಸಂಗೀತ ಇಷ್ಟವಾಗಿದ್ದರಿಂದ ಈ ಸಿನಿಮಾವನ್ನು ಒಪ್ಪಿಕೊಂಡೆ ಎಂದು ನಿಧಿ ಸುಬ್ಬಯ್ಯ ಹೇಳುತ್ತಾರೆ.
Comments