ರಸ್ತೆ ಬದಿಯಲ್ಲಿ ಅಲಂಕಾರಿಕ ವಸ್ತುಗಳನ್ನು ಮಾರಿದ ಪ್ರಿಯಾಮಣಿ..!!

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಸದಾ ನಿಮ್ಮೊಂದಿಗೆ ಕಾರ್ಯಕ್ರಮದಲ್ಲಿ ಸ್ಟಾರ್ ಗಳು ಭಾಗವಹಿಸುತ್ತಿರುವುದು ಎಲ್ಲರಿಗೂ ತಿಳಿದೆ ಇದೆ. ಈ ಬಾರಿ ಪ್ರಿಯಾಮಣಿ ಭಾಗವಹಿಸುತ್ತಿದ್ದು, ಬಡ ಕುಟುಂಬ ಮಂಜುಳಾ-ಸಿದ್ದರಾಜು ಅವರಿಗೆ ಸಹಾಯ ಮಾಡಲು ನಿರ್ಧಾರ ಮಾಡಿ ರಸ್ತೆ ಬದಿ ನಿಂತು ವ್ಯಾಪಾರ ಮಾಡಿದ್ದಾರೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಂಜುಳಾ ಎಂಬ ಮಹಿಳೆಗೆ ಸಹಾಯ ಮಾಡಲು ಪಂಚ ಭಾಷಾ ನಟಿ ಪ್ರಿಯಾ ಮಣಿ, ರಸ್ತೆ ಬದಿಯಲ್ಲಿ ಸ್ಟಿಕ್ಕರ್, ಹೇರ್ ಬ್ಯಾಂಡ್, ಕ್ಲಿಪ್‍ಗಳನ್ನು ಮಾರಾಟ ಮಾಡಿ ಹಣ ಸಂಗ್ರಹಿಸಿ ನೆರವನ್ನು ನೀಡಿದ್ದಾರೆ. ದೊಡ್ಡ ಗಣಪತಿ ದೇವಾಲಯದ ಎದುರು ನಟಿ ಪ್ರಿಯಾಮಣಿ ತಳ್ಳುವ ಗಾಡಿಯಲ್ಲಿ ಅಲಂಕಾರಿಕ ವಸ್ತುಗಳಾದ ಬಳೆ, ರಿಂಗ್, ಸ್ಟಿಕ್ಕರ್, ಹೇರ್ ಬ್ಯಾಂಡ್ ಮಾರುತ್ತಿರುವುದನ್ನು ಕಂಡು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ಬಾರಿ ಪ್ರಿಯಾಮಣಿ ಎಷ್ಟು ಸಂಪಾದಿಸುತ್ತಾರೆ ಎನ್ನುವುದನ್ನ ಭಾನುವಾರ ಪ್ರಸಾರ ಮಾಡುವ ಸಂಚಿಕೆಯಲ್ಲಿ ಕಾದು ನೋಡಬೇಕು.
Comments