ಪೊಲೀಸರ ವಿರುದ್ಧವೇ ದೂರು ದಾಖಲಿಸಲು ಹೊರಟ 'ಅಂತ್ಯ' ಚಿತ್ರತಂಡ..!!

ಕಳೆದ ನಾಲ್ಕೈದು ದಿನಗಳಿಂದಲೂ ಕೂಡ ಗಾಂಜಾ ಹಾಡಿಗೆ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಲೆ ಇವೆ. ರ್ಯಾಪರ್ ಚಂದನ್ ಶೆಟ್ಟಿ ಹಾಡಿದ 'ಅಂತ್ಯ' ಸಿನಿಮಾದ ಗಾಂಜಾ ಕುರಿತಾದ ಹಾಡು ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡುತ್ತದೆ ಎಂದು ಸಿಸಿಬಿ ಪೊಲೀಸರು ಆರೋಪಿಸಿರುವ ಹಿನ್ನಲೆಯಲ್ಲಿ ಇದೀಗ ಈ ಹಾಡಿನ ರಚನೆಕಾರ ಹಾಗು ಚಿತ್ರದ ನಿರ್ಮಾಪಕ ಪೊಲೀಸರೇ ವಿರುದ್ಧವೇ ದೂರು ನೀಡಲು ಮುಂದಾಗಿದ್ದಾರೆ.
'ಅಂತ್ಯ' ಸಿನಿಮಾದ ಗಾಂಜಾ ಕುರಿತಾದ ಹಾಡನ್ನು ಸಿಂಗರ್ ಚಂದನ್ ಶೆಟ್ಟಿ ಹಾಡಿದ ಕಾರಣ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ಸಮನ್ಸ್ ಕೂಡ ಜಾರಿ ಮಾಡಿದ್ದರು. ನಂತರ ಚಂದನ್ ಪೊಲೀಸರ ಮುಂದೆ ಹಾಜರಾಗಿ ತಾವು ಹಾಡು ಹಾಡಿದ್ದು ತಪ್ಪು ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದರೆ ಹಾಡಿನ ಸಾಹಿತ್ಯ ರಚನಕಾರರಾದ ಮುತ್ತು ಮತ್ತು ನಿರ್ಮಾಪಕ ಅವಿನಾಶ್ ಸಿಸಿಬಿ ಪೊಲೀಸರ ವಿರುದ್ದ ಕಿಡಿಕಾರಿದ್ದಾರೆ. ಅಷ್ಟೆ ಅಲ್ಲದೆ "ನಮ್ಮ ಫಿಲ್ಮ್ ಸೆನ್ಸಾರ್ ಬೋರ್ಡ್ ಅಂತಿಮ ತಿರ್ಮಾನವನ್ನು ಕೊಡುತ್ತದೆ. ಯೂಟ್ಯೂಬ್‍ನಲ್ಲಿ ಈ ಸಾಂಗ್ಸ್ ತೆಗಿಯಿರಿ ಅಂತಾ ಹೇಳೋದು ಪೊಲೀಸರ ಕೆಲಸವಲ್ಲ. ಒಂದು ವೇಳೆ ತೆಗಿಯಲೇ ಬೇಕಾದ್ರೆ ಎಲ್ಲಾ ಭಾಷೆಯ ನಶೆಯ ಹಾಡುಗಳನ್ನು ತೆಗೆಸಲಿ" ಎಂದು 'ಅಂತ್ಯ' ಚಿತ್ರತಂಡ ಪೊಲೀಸರ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡಲು ನಿರ್ಧಾರ ಮಾಡಿದೆ ಎಂದು ಹೇಳಲಾಗಿದೆ.
Comments