ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರದಿಂದ ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್

ಸ್ಯಾಂಡಲ್ ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಡೆಯ ಚಿತ್ರದ ಮುಹೂರ್ತವು ಇತ್ತೀಚಿಗೆ ಮೈಸೂರಿನಲ್ಲಿ ನಡೆಯಿತು. ಮೊದಲ ಹಂತದ ಚಿತ್ರೀಕರಣ ಸೆಪ್ಟೆಂಬರ್ 10 ರಿಂದ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಇನ್ನು ಒಡೆಯ ಚಿತ್ರವು ತಮಿಳಿನ ವೀರಂನ ರಿಮೇಕ್ ಆಗಿದೆ. ಈ ಸಿನಿಮಾವು ಅಣ್ಣ-ತಮ್ಮಂದಿರ ಕಥೆಯನ್ನು ಹೇಳುತ್ತದೆ. ದರ್ಶನ್ ಈ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡರೆ, ಅವರಿಗೆ ನಾಲ್ವರು ತಮ್ಮಂದಿರು ಇರಲಿದ್ದಾರೆ.
ಈಗ ಆ ಪಾತ್ರಗಳಿಗೆ ಕಲಾವಿದರ ಆಯ್ಕೆ ಫೈನಲ್ ಆಗಿದೆ. ದರ್ಶನ್ ತಮ್ಮಂದಿರಾಗಿ ಯಶಸ್, ಪಂಕಜ್, ನಿರಂಜನ್ ಹಾಗೂ ಸಮರ್ಥ್ ನಟಿಸಲಿದ್ದಾರೆ. ಒಡೆಯ ಚಿತ್ರದ ಮೊದಲ ಹಂತದ ಶೂಟಿಂಗ್ ಮೈಸೂರಿನಲ್ಲೇ 35 ರಿಂದ 40 ದಿನಗಳ ವರೆಗೂ ನಡೆಯಲಿದೆ. ಆ ನಂತರ ಬೆಂಗಳೂರು, ಹೈದರಾಬಾದ್ ಮುಂತಾದ ಕಡೆ ಚಿತ್ರೀಕರಣ ಸಾಗಲಿದೆ. ಚಿತ್ರದಲ್ಲಿ ರವಿಶಂಕರ್, ದೇವರಾಜ್, ಚಿಕ್ಕಣ್ಣ, ಸಾಧುಕೋಕಿಲ ಮುಂತಾದವರು ನಟಿಸುತ್ತಿದ್ದು, ಚಿತ್ರಕ್ಕೆ ಇನ್ನೂ ನಾಯಕಿಯನ್ನು ಆಯ್ಕೆ ಮಾಡಿಲ್ಲ ಚಿತ್ರತಂಡ. ಇನ್ನು ಒಡೆಯ ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಸಂದೇಶ್ ಕಂಬೈನ್ಸ್ ನಡಿ ಸಂದೇಶ್ ನಾಗರಾಜ್ ನಿರ್ಮಾಣವನ್ನು ಮಾಡುತ್ತಿದ್ದಾರೆ.
Comments