ರ‍್ಯಾಪರ್ ಚಂದನ್ ಶೆಟ್ಟಿಯ ಪರ ನಿಂತ ಬಾರ್ಬಿ ಡಾಲ್ ನಿವೇದಿತಾ

ಕಳೆದ ಮೂರು ದಿನಗಳಿಂದ ಚಂದನ್ ಶೆಟ್ಟಿಗೆ ಗಾಂಜಾ ಹಾಡಿನ ಸಂಕಷ್ಟ ಎದುರಾಗಿದೆ. ಗಾಂಜಾ ಹಾಡಿಗೆ ಸಂಬಂಧ ಪಟ್ಟಂತೆ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಈಗ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ಎಚ್ಚರಿಕೆ ನೀಡಿರುವ ವಿಚಾರ ಸಾಕಷ್ಟು ಸುದ್ದಿ ಮಾಡ್ತಿದೆ. ಅದರ ವಿಚಾರವಾಗಿ ತನಿಖೆ ಮಾಡಲಾಗುತ್ತಿದೆ.
ಯುವಕರಿಗೆ ಗಾಂಜಾ ಸೇವನೆಗೆ ಪ್ರಚೋದನೆ ನೀಡಿದ ಕಾರಣ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ವಾರ್ನಿಂಗ್ ಕೊಟ್ಟಿದ್ದಾರೆ. ಈಗ ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಬಿಗ್ ಬಾಸ್ ಗೊಂಬೆ ನಿವೇದಿತಾ, ಚಂದನ್ ಶೆಟ್ಟಿ ಬೆನ್ನಿಗೆ ನಿಂತಿದ್ದಾರೆ. ನನಗೆ ಗೊತ್ತಿರುವ ಹಾಗೆ ಚಂದನ್ ಶೆಟ್ಟಿ ಒಬ್ಬ ಗಾಯಕನಾಗಿ ಆ ಹಾಡು ಹಾಡಿದ್ದಾರೆ ಹೊರತು ಅವರಿಗೆ ಮಾದಕವಸ್ತು ಸೇವನೆ ಬಗ್ಗೆ ಪ್ರಚೋದನೆ ನೀಡುವಂತಾ ಯಾವ ಉದ್ದೇಶವೂ ಕೂಡ ಇಲ್ಲ. ಆ ಹಾಡು ಹಳೆಯದಾಗಿರುವ ಕಾರಣ ಈಗ ಸಮಸ್ಯೆ ಆಗ್ತಿದೆ. ಆದ್ರೆ ಚಂದನ್ ಆ ಹಾಡನ್ನು ಬರೆದಿಲ್ಲ ಅಂತ ನಿವೇದಿತಾ ಚಂದನ್ ಶೆಟ್ಟಿ ಪರ ನಿಂತಿದ್ದಾರೆ. ಬಿಗ್ ಬಾಸ್ ಮನೆಯಿಂದಲೂ ಚಂದನ್ ಶೆಟ್ಟಿ ಮತ್ತು ಗೊಂಬೆ ನಿವೇದಿತಾ ಗೌಡ ಬೆಸ್ಟ್ ಫ್ರೆಂಡ್ಸ್ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಅದೇ ಕಾರಣಕ್ಕೆ ಅವರು ಚಂದನ್ ಶೆಟ್ಟಿ ಪರವಾಗಿ ನಿಂತಿದ್ದಾರೆ ಅಷ್ಟೆ.
Comments