ಉಪೇಂದ್ರಗೂ ತಪ್ಪಿದ್ದಲ್ಲ ಸ್ಟಾರ್ ವಿವಾದ : ಬುದ್ಧಿವಂತನ ಪ್ಲೇಸ್’ಗೆ ಮತ್ತೊಬ್ಬ ಸ್ಟಾರ್ ಎಂಟ್ರಿ!!!

ಸ್ಯಾಂಡಲ್ವುಡ್ ನಲ್ಲಿ ಬಹು ಬೇಡಿಕೆ ನಟ , ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ. ಆದರೆ ಇತ್ತೀಚೆಗೆ ಉಪೇಂದ್ರ ಸ್ಥಾನವನ್ನು ಮತ್ತೊಬ್ಬ ಸ್ಟಾರ್ ಕಿತ್ತುಕೊಳ್ಳುತ್ತಿದ್ದಾರೆ ಎಂದು ಉಪೇಂದ್ರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರರಂಗಕ್ಕೆ ಒಬ್ಬರೇ 'ಸೂಪರ್ ಸ್ಟಾರ್', ಒಬ್ಬರೇ 'ರಿಯಲ್ ಸ್ಟಾರ್' ಅದು ನಮ್ಮ ಉಪೇಂದ್ರ ಎನ್ನುವುದು ಉಪ್ಪಿ ಅಭಿಮಾನಿಗಳ ಘೋಷವಾಕ್ಯ ಇಂದಿಗೂ ಬುದ್ಧಿವಂತನ ಪ್ಲೇಸ್ಗೆ ಬೇರೆ ಯಾರು ಬರುವುದಕ್ಕೆ ಆಗುವುದಿಲ್ಲ. ಚಿತ್ರರಂಗದಲ್ಲಿ ಉಪೇಂದ್ರ ಅಂದ್ರೇನೇ ಅವರಿಗೆ ಬೇರೆಯದ್ದೇ ಆದ ಸ್ಥಾನ-ಗೌರವ ಇದೆ. ಆದರೆ ಸೂಪರ್ ಸ್ಟಾರ್ ಅನ್ನುವ ಉಪೇಂದ್ರ ಸ್ಟಾರ್ ಗಿರಿಯನ್ನು ಮತ್ತೊಬ್ಬ ನಟನಿಗೆ ಇಡಲಾಗುತ್ತಿದೆ ಎಂದರೆ ಉಪ್ಪಿ ಅಭಿಮಾನಿಗಳು ಸುಮ್ಮನಿರುತ್ತಾರೆಯೇ….?'ಮಾಸ್ತಿಗುಡಿ' ಚಿತ್ರದ ವೇಳೆ ದುನಿಯಾ ವಿಜಯ್ ಅವರಿಗೆ ಟೈಟಲ್ ಕಾರ್ಡ್ ನಲ್ಲಿ 'ಸೂಪರ್ ಸ್ಟಾರ್' ಎಂದು ಬಿರುದು ನೀಡಿದ್ದರು. ಆ ನಂತರ ಉಪ್ಪಿ ಅಭಿಮಾನಿಗಳು ವಿರೋಧಿಸಿದ್ದರಿಂದ ಆ ಟೈಟಲ್ ನ್ನು ಹಿಂದಕ್ಕೆ ಪಡೆಯಲಾಯ್ತು.ಕಿರುತೆರೆಯ ಸೂಪರ್ ಸ್ಟಾರ್ ಅಂತಾನೇ ಕರೆಯುವ ಜೆಕೆ ಅಲಿಯಾಸ್ ಕಾರ್ತಿಕ್ ಜಯರಾಂ ಅಭಿನಯದ ಚಿತ್ರದಲ್ಲಿ ಮತ್ತೆ ಅದೇ ತಪ್ಪಾಗಿದೆ ಎಂದು ಉಪ್ಪಿ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಜೆಕೆಗೆ 'ಸೂಪರ್ ಸ್ಟಾರ್' ಎಂದು ಟೈಟಲ್ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.
Comments