ದರ್ಶನ್ ಅವರದ್ದು ಲಕ್ಕಿ ಹ್ಯಾಂಡ್ ಅನ್ನೋದು ಮತ್ತೊಮ್ಮೆ ಪ್ರೂ ಆಯ್ತು...!

ಸಂಗೀತ ನಿರ್ದೇಶಕ ವಿ ಶ್ರೀಧರ್ ಸಂಭ್ರಮ್ "ನಮ್ಮ ಡಿ ಬಾಸ್ ದರ್ಶನ್ ವ್ರದ್ದು ಲಕ್ಕಿ ಹ್ಯಾಂಡ್' ಅಂತಾ ಹೇಳಿದ್ದಾರೆ. 'ಇರುವುದೆಲ್ಲವ ಬಿಟ್ಟು' ಸಿನಿಮಾದ ಟ್ರೇಲರ್ ಬಿಡುಗಡೆಯ ಕಾರ್ಯಕ್ರಮದಲ್ಲಿ ಹೇಳಿದ ಈ ಮಾತುಗಳು ನಿಜ ಆಗಿದೆ. ಒಳ್ಳೆಯ ಸಿನಮಾಗಳಿಗೆ ದರ್ಶನ್ ಹೆಚ್ಚು ಹೆಚ್ಚು ಪ್ರೊತ್ಸಾಹ ನೀಡುತ್ತಿದ್ದಾರೆ.
ಅದೇ ರೀತಿ ನಿನ್ನೆ ಮೇಘನಾ ರಾಜ್ ನಟನೆಯ 'ಇರುವುದಿಲ್ಲವ ಬಿಟ್ಟು' ಸಿನಿಮಾದ ಟ್ರೇಲರ್ ಅನ್ನು ದರ್ಶನ್ ಲಾಂಚ್ ಮಾಡಿದರು. ಈ ಸಿನಿಮಾವು ಹಾಡುಗಳ ಮೂಲಕ ಎಲ್ಲರ ಗಮನಸನ್ನು ಗೆದ್ದಿದ್ದಾರೆ.. ಯೂ ಟ್ಯೂಬ್ ನಲ್ಲಿ ಟ್ರೇಲರ್ ಕೂಡ ಸೂಪರ್ ಹಿಟ್ ಆಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೃಪೆಯಿಂದ 'ಇರುವುದಿಲ್ಲವ ಬಿಟ್ಟು' ಸಿನಿಮಾ ಮತ್ತಷ್ಟು ಜನರನ್ನು ತಲುಪುತ್ತಿದೆ. ವಿ ಶ್ರೀಧರ್ ಸಂಭ್ರಮ್ ಅವರು ದರ್ಶನ್ ಅವರದ್ದು ಲಕ್ಕಿ ಹ್ಯಾಂಡ್ ಎಂದಿದ್ದು ನಿಜವಾಗಿ ಬಿಟ್ಟಿದೆ... ದರ್ಶನ್ ತಮ್ಮ ಕೈಯಾರೆ ಬಿಡುಗಡೆ ಮಾಡಿದ್ದ ಸಿನಿಮಾದ ಟ್ರೇಲರ್ ಈಗ ಯೂಟ್ಯೂಬ್ ನಲ್ಲಿ 20ನೇ ಟ್ರೆಂಡಿಂಗ್ ವಿಡಿಯೋ ಆಗಿದೆ. ನಿಮಿಷದಿಂದ ನಿಮಿಷಕ್ಕೆ ಟ್ರೇಲರ್ ಗೆ ಬರುತ್ತಿರುವ ಹಿಟ್ಸ್ ಹೆಚ್ಚಾಗುತ್ತಿದೆ ಎಂಬ ಸಂಭ್ರಮದಲ್ಲಿದ್ದಾರೆ ಚಿತ್ರತಂಡ.
Comments