ಕೊಡಗು ಜನರ ಸಹಾಯಕ್ಕೆ ಹೆಗಲು ಕೊಟ್ಟ ಮಜಾಟಾಕೀಸ್ ಟೀಮ್…ವೀಡಿಯೋ ವೈರಲ್

ಎಲ್ಲರಿಗೂ ಗೊತ್ತಿರೋ ಹಾಗೆ, ಮಜಾ ಟಾಕೀಸ್… ನಿಮ್ಮನ್ನ ಹಾಸ್ಯದ ಮೂಲಕ ನಗಿಸುವ ಕಾರ್ಯಕ್ರಮ… ಈ ಕಾರ್ಯಕ್ರಮದ ಸಾರಥಿ ಸೃಜನ್ ಲೋಕೇಶ್, ತನ್ನ ತಂದೆಯ ಹೆಸರಿನಲ್ಲಿ ನಡೆಸಿಕೊಡುತ್ತಿರುವ ಕಾರ್ಯಕ್ರಮವಿದು.. ಇಲ್ಲಿ ನಗಿಸುವುದು ಮಾತ್ರವಲ್ಲ, ನೋವಿಲ್ಲಿರುವವರಿಗೂ ತಮ್ಮ ನೆರವಿನ ಹಸ್ತವನ್ನ ಚಾಚಿದ್ದಾರೆ.…
ಎಸ್.. ಮಜಾ ಟಾಕೀಸ್ ಟೀಮ್ ಒಂದಾಗಿ ಕೊಡಗಿನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನ ಎದುರಿಸುತ್ತಿರುವ ಜನರ ನೆರವಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಮಾದರಿಯಾಗಿದ್ದಾರೆ.… ಸೃಜಲ್ ಲೋಕೇಶ್ ತಮ್ಮ ತಂಡದೊಂದಿಗೆ ಸೇರಿ, ಕೊಡಗಿನ ಜನತೆಗೆ ಬೇಕಾದ ಮೂಲ ಸಾಮಾಗ್ರಿಗಳನ್ನ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.. ಹಾಲಿನ ಪೌಡರ್, ನ್ಯಾಪ್ಕಿನ್ಸ್, ವಾಟರ್ ಬಾಟಲ್, ಫುಡ್ ಪ್ಯಾಕೆಟ್, ಅಕ್ಕಿ, ಬಟ್ಟೆ ಸೇರಿದಂತೆ ಹಲವು ಸಾಮಾಗ್ರಿಗಳನ್ನ ಶೇಖರಣೆ ಮಾಡಿ, ಅವೆಲ್ಲವನ್ನೂ ಕೊಡಗಿಗೆ ಸಾಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ.… ನಿಮ್ಮ ಕೈಲಾದ ಸೇವೆಯನ್ನ ಮಾಡುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.. ಇನ್ನು ಇದನ್ನ ನಟ ಸೃಜನ್ ಲೋಕೇಶ್ ತಮ್ಮ ಫೇಸ್ ಬುಕ್ ನಲ್ಲಿ ವೀಡಿಯೋ ಮಾಡಿ ಹಾಕುವುದರ ಮೂಲಕ ಹೇಳೀದ್ದಾರೆ. ಸದ್ಯ ಈ ವೀಡಿಯೋ ಸಖತ್ ವೈರಲ್ ಆಗಿದೆ.
Comments