ಮತ್ತೆ ಸುದ್ದಿಯಲ್ಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್..? ಕಾರಣ ಏನ್ ಗೊತ್ತಾ..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಇದೀಗ ಸುದ್ದಿಯಲ್ಲಿದ್ದಾರೆ , ಅದಕ್ಕೆ ಕಾರಣ ಈ ಚಿತ್ರ. ಸ್ಯಾಂಡಲ್ ವುಡ್ ನಲ್ಲಿ ಇದೇ ಮೊದಲ ಬಾರಿಗೆ ತಿಲಕ್ ಮತ್ತು ಮೇಘನಾ ರಾಜ್ ಜೋಡಿ ಅಭಿನಯಿಸುತ್ತಿರುವ 'ಇರುವುದೆಲ್ಲವ ಬಿಟ್ಟು..' ಚಿತ್ರವು ಪೋಸ್ಟರ್ ಗಳಿಂದಲೇ ಸಿನಿರಸಿಕರ ಗಮನವನ್ನು ಸಖತ್ತಾಗಿಯೇ ಸೆಳೆಯುತ್ತಿದೆ.ಈ ಚಿತ್ರಕ್ಕೆ ಈಗ ನಟ ದರ್ಶನ್ ಕೂಡ ಸಾಥ್ ನೀಡಿದ್ದಾರೆ.
ಇರುವುದೆಲ್ಲವ ಬಿಟ್ಟು. ಇರುವೆ ಬಿಟ್ಟುಕೊಳ್ಳುವುದೇ ಜೀವನ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಲಿದೆ. ನಟ ದರ್ಶನ್ ಈ ಸಿನಿಮಾದ ಟ್ರೇಲರ್ ನ್ನು ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಮತ್ತೊಂದು ಸಿನಿಮಾ ತಂಡಕ್ಕೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಕೊಡುತ್ತಿದ್ದಾರೆ. ಇದೇ ಪ್ರಥಮ ಬಾರಿಗೆ ತಿಲಕ್ ಮತ್ತು ಮೇಘನಾ ರಾಜ್ ಜೋಡಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಚಿತ್ರದ ಟೈಟಲ್ ಬಹಳ ವಿಭಿನ್ನವಾಗಿದ್ದು, ಸಿನಿಮಾದಲ್ಲಿ ಹೇಗಿದೆ ಎಂಬ ಕುತೂಹಲ ಸಿನಿರಸಿಕರಲ್ಲಿ ಸಾಮಾನ್ಯವಾಗಿದೆ. ದಾವಣಗೆರೆ ದೇವರಾಜ್ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ಚಿತ್ರದ ಫಸ್ಟ್ ಲುಕ್ ಈಗಾಗಲೇ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
Comments