ಗುರುಪ್ರಸಾದ್ ಹಾಗೂ ಜಗ್ಗೇಶ್ ಕಾಂಬೀನೇಷನ್'ನಲ್ಲಿ ಬರುತ್ತಿದೆ ಮತ್ತೊಂದು ಚಿತ್ರ
ಮಠ, ಎದ್ದೇಳು ಮಂಜುನಾಥ ಸಿನಿಮಾಗಳ ಬಳಿಕ ಜಗ್ಗೇಶ್ ಮತ್ತು ಗುರುಪ್ರಸಾದ್ ಜೋಡಿ ಮತ್ತೆ ಒಂದಾಗಿದ್ದಾರೆ. ಮುಂದಿನ ವರ್ಷ ಹೊಸ ಸಿನಿಮಾ ಸೆಟ್ಟೇರಲಿದೆ ಎಂದು ಜಗ್ಗೇಶ್ ತಿಳಿಸಿದ್ದಾರೆ.
ನಟ ಜಗ್ಗೇಶ್, ನಿರ್ದೇಶಕ ಗುರುಪ್ರಸಾದ್ ಈ ಜೋಡಿಯೇ ಸ್ಯಾಂಡಲ್ ವುಡ್ ನಲ್ಲಿ ಒಂದು ನಿರೀಕ್ಷೆ ಇದ್ದ ಹಾಗೆ, ಹಾಗಾಗಿ ಮುಂದಿನ ಸಿನಿಮಾ ಬಗ್ಗೆ ಈಗಿನಿಂದಲೇ ಕುತೂಹಲ ಮೂಡಿದೆ. ನಾವಿಬ್ಬರು ಸಿನಿಮಾ ಮಾಡುತ್ತಿರುವುದು ನಿಜ. ಜನವರಿಯಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ಇಷ್ಟು ಮಾತ್ರ ಸದ್ಯಕ್ಕೆ ಅಂತಿಮವಾಗಿದ್ದು, ಕಥೆ, ಟೈಟಲ್ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಜಗ್ಗೇಶ್ ಹೇಳಿದ್ದಾರೆ.
Comments