‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಟೀಸರ್’ನಲ್ಲಿ ಮೆಗಾಸ್ಟಾರ್ ಲುಕ್ ರಿವೀಲ್..! ಟೀಸರ್ ಹೇಗಿದೆ ನೀವೊಮ್ಮೆ ನೋಡಿ

ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಟೀಸರ್ ಸಖತ್ ಸದ್ದು ಮಾಡುತ್ತಿದೆ, ಇಂದು ಮೆಗಾಸ್ಟಾರ್ ಚಿರಂಜೀವಿಯವರ ಹುಟ್ಟುಹಬ್ಬಕ್ಕೆ ಗಿಫ್ಟ್ ಎಂಬಂತೆ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಚಿರಂಜೀವಿ ತನ್ನ ಉದ್ದನೆಯ ಕೂದಲು, ಗಡ್ಡ, ದಪ್ಪನಾದ ಮೀಸೆ ಜೊತೆಗೆ ರಕ್ಷಾಕವಚದಂತಿರುವ ಕಾಸ್ಟ್ಯೂಮ್, ಹಣೆಯಲ್ಲಿ ಉದ್ದನೆಯ ತಿಲಕದಿಂದಲೆ ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಕುದುರೆಯ ಮೇಲೆ ಕೂತು ತನ್ನ ಸೈನ್ಯವನ್ನು ಮುನ್ನಡೆಸುತ್ತಿರುವ ದೃಶ್ಯಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸ್ವಾತಂತ್ರ್ಸೋವದ ಸಮಯದಲ್ಲಿ ನಡೆದಂತಹ ಹಲವಾರು ಸನ್ನಿವೇಶಗಳು ಈ ಚಿತ್ರದಲ್ಲಿದ್ದು, ಒಂದು ಅದ್ಭುತ ಐತಿಹಾಸಿಕ ಸಿನಿಮಾ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಬ್ರೀಟಿಷರ ಜೊತೆ ನಡೆದ ಯುದ್ದಗಳ ಜೊತೆಗೆ ಇನ್ನೂ ಹಲವಾರು ಸನ್ನಿವೇಶಗಳನ್ನು ತೆರೆಮೇಲೆ ತರಲು ಸಿದ್ದರಾಗಿದ್ದಾರೆ. ಈಗಾಗಲೇ ಈ ಚಿತ್ರದ ಟೀಸರ್ ಸಖತ್ ಸದ್ದು ಮಾಡುತ್ತಿದ್ದು ಸಿನಿಮಾರಸಿಕರಲ್ಲಿ ಕ್ಯೂರಾಸಿಟಿಯನ್ನು ಕ್ರಿಯೇಟ್ ಮಾಡಿದೆ. ಈ ಸಿನಿಮಾವನ್ನು ಸುರೇಂದ್ರ ರೆಡ್ಡಿ ನಿರ್ದೇಶನ ಮಾಡುತ್ತಿದ್ದು, ನಯನತಾರ, ಅಭಿಷೇಕ್ ಬಚ್ಚನ್ ಹಾಗೂ ಬಹುತಾರಗಣವಿದೆ. ಈ ಚಿತ್ರವನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
Comments