30 ವರ್ಷಗಳ ನಂತರ ಬಣ್ಣ ಹಚ್ಚಲಿರುವ ಒನ್ ಅಂಡ್ ಓನ್ಲಿ ವರಲಕ್ಷ್ಮಿ ಅಲಿಯಾಸ್ ಅಪರ್ಣಾ

ಅಪರ್ಣ ಅಂದರೆ ಎಲ್ಲರಿಗೂ ಕೂಡ ಗೊತ್ತೆ ಇದೆ. ಅಪರ್ಣ ಅನ್ನೋದಕ್ಕಿಂತ ಒನ್ ಅಂಡ್ ಓನ್ಲಿ ವರಲಕ್ಷ್ಮಿ ಅಂದರೆ ಪಟ್ ಅಂತ ಎಲ್ಲರಿಗೂ ನೆನಪಾಗುತ್ತದೆ. ಅಂದಿನಿಂದ ಇಂದಿನವರೆಗೂ ಕೂಡ ಅದೇ ಗ್ಲಾಮರಸ್’ನಲ್ಲಿರುವ ನಟಿ ಅಪರ್ಣಾ ಎವರ್ ಗ್ರೀನ್ ನಟಿ.
ವಿನಯ್ ರಾಜ್ ಕುಮಾರ್ ಹಾಗೂ ಅಮೃತಾ ಐಯ್ಯರ್ ಅಭಿನಯಿಸುತ್ತಿರುವ ದೇವರ್ನೂರು ಚಂದ್ರು ನಿರ್ದೇಶನದ ಗ್ರಾಮಾಯಣ ಚಿತ್ರದಲ್ಲಿ ಹಿರಿಯ ಕಲಾವಿದೆ ಅಪರ್ಣಾ ಕೂಡ ಅಭಿನಯಿಸಲಿದ್ದಾರೆ. ಈ ಚಿತ್ರದ ಮೂಲಕ ಸುಮಾರು 30 ವರ್ಷಗಳ ಬಳಿಕ ಕನ್ನಡ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಅಪರ್ಣಾ ಪುಟ್ಟಣ್ಣ ಕಣಗಾಲ್ ಅವರ 1984ರಲ್ಲಿ ತೆರೆಕಂಡ ಮಸಣದ ಹೂವು ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದರು. ನಂತರ ಇನ್ಸ್ ಪೆಕ್ಟರ್ ವಿಕ್ರಮ್, ನಮ್ಮೂರ ರಾಜ ಮತ್ತು ಒಂದಾಗಿ ಬಾಳು ಸಿನಿಮಾಗಳಲ್ಲೂ ಕೂಡ ನಟಿಸಿದ್ದರು. ಬಳಿಕ ಸಿನಿಮಾ ಬಿಟ್ಟು ರೇಡಿಯೊ, ಧಾರವಾಹಿಗಳಲ್ಲಿ ಮತ್ತು ಕಾರ್ಯಕ್ರಮ ನಿರೂಪಣೆಗಳಲ್ಲಿ ಹೆಚ್ಚಾಗಿ ಕಾಣಿಸಿ ಕೊಂಡರು. ಈಗ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ನಲ್ಲಿ ಕೂಡ ಕಾಣಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Comments