ನೆರೆಸಂತ್ರಸ್ತರ ಕೈ ಹಿಡಿದ ಸ್ಯಾಂಡಲ್’ವುಡ್ ಸ್ಟಾರ್’ಗಳಿವರು..!
ಪ್ರಕೃತಿ ತಾಯಿ ಅಕ್ಷರಶಃ ಮುನಿಸಿಕೊಂಡಿದ್ದಾಳೆ… ಮಳೆರಾಯನ ಅಟ್ಟಹಾಸಕ್ಕೆ ಕೇರಳ ಕೊಡಗು ಸೇರಿದಂತೆ ನಾನಾ ಜಿಲ್ಲೆಗಳು ತತ್ತರಿಸಿ ಹೋಗಿವೆ... ಸಂಷಕ್ಟದಲ್ಲಿದ್ದ ಕೊಡಗಿಗೆ ಇಡೀ ಜನತೆಯೆ ನೆರವಿಗೆ ಧಾವಿಸಿದೆ.
ಒಂದು ವಾರದಿಂದ ಸುರಿದ ಮಳೆ ಹಾಗೂ ಭೂಕುಸಿತದಿಂದ ಕೊಡಗಿನ ಚಿತ್ರವಣವೇ ಬದಲಾಗಿ ಹೋಗಿದೆ. ಸ್ವಾಭಿಮಾನದಿಂದ ಜೀವನ ಮಾಡುತ್ತಿದ್ದ ಅಲ್ಲಿಯ ಜನ ಮನೆಮಠ ಕಳೆದುಕೊಂಡು ನಿರಾಶ್ರಿತರ ಕೇಂದ್ರ ಸೇರಿಕೊಂಡಿದ್ದಾರೆ. ನಮ್ಮ ಕನ್ನಡ ಚಿತ್ರರಂಗ ಕೂಡ ನೆರವಿಗೆ ಕೈ ಜೋಡಿಸಿದ್ದಾರೆ. ಸ್ಯಾಂಡಲ್ವುಡ್ನ ಸುದೀಪ್, ದರ್ಶನ್, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್, ಯಶ್, ಚೇತನ್, ರವಿಚಂದ್ರನ್, ಗಣೇಶ್, ಉಪೇಂದ್ರ, ಧನಂಜಯ್, ಜಗ್ಗೇಶ್, ಭುವನ್, ಹರ್ಷಿಕಾ ಪೂಣಚ್ಚ, ನಿರ್ದೇಶಕ ಸಂತೋಷ್ ಆನಂದ್ರಾಮ್, ಜೋಗಿ ಪ್ರೇಮ್ ಸೇರಿದಂತೆ ಸಾಕಷ್ಟು ತಾರೆಯರು ಸಹಾಯ ಮಾಡುವುದರ ಜತೆಗೆ ತಮ್ಮ ಅಭಿಮಾನಿಗಳಲ್ಲಿ ನಿರಾಶ್ರಿತರಿಗೆ ನೆರವಾಗುವಂತೆ ಮನವಿ ಮಾಡಿಕೊಂಡಿದ್ದಾರೆ.
Comments