‘ರೇಡಿಯೋ’ ಸಖತ್ ಸದ್ದು ಮಾಡಲು ಮೂಹೂರ್ತ ಫಿಕ್ಸ್




ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಚಿತ್ರಗಳು ತೆರೆ ಮೇಲೆ ಬರುತ್ತಲೆ ಇರುತ್ತವೆ. ಇದರ ನಡುವೆ ಕಿರುಚಿತ್ರಗಳು ಕೂಡ ಸಖತ್ ಸದ್ದು ಮಾಡುತ್ತಿವೆ.
ಅದೇ ರೀತಿ ನಿನ್ನೆ ಅಷ್ಟೆ ರೇಡಿಯೋ ಎಂಬ ಕಿರು ಚಿತ್ರಕ್ಕೆ ಮೂಹೂರ್ತ ನಡೆದಿದೆ. ರೇಡಿಯೋ ಎಂಬ ಹೆಸರಲ್ಲೆ ಸಖತ್ ಕ್ರೇಜ್ ಕ್ರಿಯೇಟ್ ಮಾಡಿರೋ ಕಿರು ಚಿತ್ರ ಇದಾಗಿದೆ. Thinkmacha VFX studios ನಿರ್ಮಾಣ ಮತ್ತು ನಿರ್ವಹಣೆಯ ಹೊಣೆ ಹೊತ್ತಿದೆ. ಈ ಚಿತ್ರವನ್ನು ಅರವಿಂದ್ ಬಿಎಮ್ ನಿರ್ದೇಶನ ಮಾಡುತ್ತಿದ್ದಾರೆ. ಗಂಧರ್ವ ಕೆ ಅವರು ತಮ್ಮ ಕ್ಯಾಮರ ಕೈ ಚಳಕವನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಇನ್ನೂ ವೆಂಕಿ ಜೆ ಅವರು ಈ ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡಲಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ಅರುಣ್ ಬನ್ನಿ ನಟಿಸುತ್ತಿದ್ದು, ಶಾಂಭವಿ ಮಡಿವಾಳ್ ಇವರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಒಟ್ಟಾರೆ ಹೊಸಬರೆ ಸೇರಿಕೊಂಡು ಮಾಡುತ್ತಿರುವ ಈ ಚಿತ್ರಕ್ಕೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.
Comments