ಅನಂತ್’ನಾಗ್ ಅಭಿನಯಿಸಿರುವ 'ಮೈಸೂರ್ ಮಸಾಲಾ' ಚಿತ್ರದ ಪೋಸ್ಟರ್ ರಿಲೀಸ್.. ಹೇಗಿದೆ ನೀವೊಮ್ಮೆ ನೋಡಿ

'ಮೈಸೂರ್ ಮಸಾಲಾ' ಚಿತ್ರದ ಹೆಸರೆ ಒಂಥರಾ ವಿಚಿತ್ರವಾಗಿದೆ.ಅನಂತ್ ನಾಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಮೈಸೂರ್ ಮಸಾಲಾ ಚಿತ್ರದ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಅಂತರಾಷ್ಟ್ರೀಯ ಕಿರುಚಿತ್ರ ಉತ್ಸವದಲ್ಲಿ ಮೈಸೂರು ಮಸಾಲಾ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು. ಈ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಅನಂತ್ ನಾಗ್, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಹೊರನಾಡು ಮತ್ತು ಶ್ರೀನಿವಾಸ್ ಕಿರಣ್ ಮತ್ತಿತರರು ಪಾಲ್ಗೊಂಡಿದ್ದರು.. ಈ ಸಿನಿಮಾವನ್ನು ಅಜಯ್ ಸರ್ಪೇಷ್ಕರ್ ನಿರ್ದೇಶನ ಮತ್ತು ನಿರ್ಮಾಣವನ್ನು ಮಾಡಿದ್ದಾರೆ.
Comments