ಅಂತೂ ಇಂತೂ 'ಲಂಬೋದರ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಯ್ತು
ಇದೀಗ ಕೃಷ್ಣರಾಜ್ ನಿರ್ದೇಶನದ ಲೂಸ್ ಮಾದ ಯೋಗಿ ಅಭಿನಯದ 'ಲಂಬೋದರ' ಸಿನಿಮಾದ ಶೂಟಿಂಗ್ ನಿನ್ನೆ ಅಷ್ಟೆ ಕಂಪ್ಲೀಟ್ ಆಗಿದ್ದು, ಲಂಬೋಧರ ಚಿತ್ರ ತಂಡ ಕುಂಬಳಿಕಾಯಿ ಒಡೆಯುವುದರ ಮೂಲಕ ಚಿತ್ರೀಕರಣವನ್ನು ಮುಗಿಸಿದೆ.
ಬೆಂಗಳೂರಿನ ಬಸವನಗುಡಿ ಸುತ್ತಮುತ್ತಲಿನ ಘಟನೆಗಳನ್ನು ಲಂಬೋದರ ಸಿನಿಮಾದ ಮೂಲಕ ತೆರೆಗೆ ತರಲು ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಕೆ ಕೃಷ್ಣ. ಬಹಳ ಗ್ಯಾಪ್ ನ ನಂತರ ಯೋಗಿ ಲಂಬೋದರ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಯೋಗಿಗೆ ನಾಯಕಿಯಾಗಿ ಆಕಾಂಕ್ಷಾ ಸ್ಕ್ರೀನ್ ಶೇರ್ ಮಾಡಿದ್ದಾರೆ. ಚಿತ್ರದಲ್ಲಿ ಲೂಸ್ ಮಾದ ಯೋಗಿ, ಧರ್ಮಣ್ಣ ಮತ್ತು ಸಿದ್ದು ಮೂಲಿಮನಿ, ಅಚ್ಯುತಕುಮಾರ್, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ, ಈ ಚಿತ್ರದಲ್ಲಿದ್ದಾರೆ.
Comments