ಅಂತೂ ಇಂತೂ ಯಶ್ ಗಡ್ಡ ತೆಗೆಯುವುದಕ್ಕೆ ಮುಹೂರ್ತ ಫಿಕ್ಸ್ ಆಯ್ತು..!?
ಕೊನೆಗೂ ಅಂತೂ ಇಂತೂ ಯಶ್ ಗಡ್ಡಕ್ಕೆ ಕತ್ತರಿ ಬೀಳುವ ಕಾಲ ಹತ್ತಿರವಾಗಲಿದೆ. ಸದ್ಯದಲ್ಲೇ ರಾಕಿಂಗ್ ಸ್ಟಾರ್ ಯಶ್ ತಮ್ಮ ಗಡ್ಡಕ್ಕೆ ಕತ್ತರಿ ಹಾಕಲಿದ್ದಾರಂತೆ.
ಕೆಜಿಎಫ್ ಸಿನಿಮಾ ಪ್ರಾರಂಭವಾಗಿನಿಂದಲೂ ಯಶ್ ಹೆಚ್ಚು ಗಡ್ಡ ಬಿಡೋದಕ್ಕೆಶುರು ಮಾಡಿದ್ದರು.ಸುಮಾರು ಒಂದುವರೆ ವರ್ಷದಿಂದ ಬಿಟ್ಟಿದ್ದ ಗಡ್ಡ ತೆಗೆಯೋಕೆ ರಾಕಿಂಗ್ ಸ್ಟಾರ್ ನಿರ್ಧಾರ ಮಾಡಿದ್ದಾರಂತೆ. ಸುದ್ದಿಗಾರರು ಯಶ್ ನಿಮ್ಮ ಕೂದಲು ಹಾಗೂ ಗಡ್ಡವನ್ನು ಯಾವಾಗ ತೆಗೆಯುತ್ತೀರಾ ಎಂದು ಕೇಳಿದ ಪ್ರಶ್ನೆಗೆ ನಾಡಿದ್ದು ಗಡ್ಡ ಢಮಾರ್ ಎಂಬ ನಗೆಯ ಉತ್ತರವನ್ನು ಕೊಟ್ಟಿದ್ದಾರಂತೆ. ಒಟ್ಟಿನಲ್ಲಿ ಗಡ್ಡಕ್ಕೆ ಮುಕ್ತಿ ಕಾಣಿಸೋಕೆ ಯಶ್ ನಿರ್ಧಾರ ಮಾಡಿದ್ದು., ಸದ್ಯದಲ್ಲೇ ಹೊಸ ಅವತಾರದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಳ್ಳಲಿದ್ದಾರೆ.
Comments