ಸಾಹಸಸಿಂಹ ವಿಷ್ಣುವರ್ಧನ್ ಅವರ ಚಿತ್ರದ ಟೈಟಲ್ ನಲ್ಲಿ ಬರ್ತಿದೆ ಮತ್ತೊಂದು ಚಿತ್ರ..!
ವಿಷ್ಣುವರ್ಧನ್ ಅಭಿನಯಿಸಿದ್ದಂತಹ ಹಲವು ಚಿತ್ರಗಳ ಟೈಟಲ್ ಅನ್ನು ಈಗಾಗಲೇ ಬಳಸಿ ಹೊಸ ಸಿನಿಮಾಗಳಿಗೆ ಬಳಸಿಕೊಳ್ಳುತ್ತಿದೆ. ವಿಷ್ಣುವರ್ಧನ್ ಅಭಿನಯದ ಮತ್ತೊಂದು ಸಿನಿಮಾದ ಶೀರ್ಷಿಕೆಯನ್ನು ಮರು ಬಳಕೆ ಮಾಡಲಾಗುತ್ತಿದೆ.
ನಿಷ್ಕರ್ಷ ಎಂಬ ಶೀರ್ಷಿಕೆಯ ಹೊಸ ಸಿನಿಮಾವು ಆಗಸ್ಟ್ 20 ರಿಂದ ಆರಂಭವಾಗುತ್ತಿದೆ. 1993 ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನು ಸುನೀಲ್ ಕುಮಾರ್ ದೇಸಾಯಿ ಅವರು ನಿರ್ದೇಶನ ಮಾಡಿದ್ದರು. ಇದೀಗ ಈ ಸಿನಿಮಾ ಹಿಮಾದ್ರಿ ಪ್ರೊಡಕ್ಷನ್ ಸಂಸ್ಥೆಯು ನಿರ್ಮಾಣವನ್ನು ಮಾಡುತ್ತಿದೆ. ಅನಿಕೇತನ್ ಈ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದು ದಿವ್ಯ ಉರುಡ ಅನೀಕೇತನ್ ಜೊತೆ ಸ್ಕ್ರೀನ್ ಷೇರ್ ಮಾಡಲಿದ್ದಾರೆ. ಸಾಯಿ ಕುಮಾರ್ , ಕಿಶೋರ್, ಚಿಕ್ಕಣ್ಣ ಸೇರಿದಂತೆ ಬಹುತಾರಾಗಣ ಈ ಚಿತ್ರದಲ್ಲಿರುವಂತಿದೆ.
Comments