ಅಧಿಕೃತವಾಗಿ ನಿಕ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಪಿಗ್ಗಿ: ಫೋಟೋ ವೈರಲ್
ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ನಿಶ್ಚಿತಾರ್ಥದ ಸುದ್ದಿ ಹರಿತಾಡುತ್ತಲೆ ಇತ್ತು. ಇದೀಗ ಆ ಸುದ್ದಿಗೆ ಇದೀಗ ತೆರೆ ಎಳಿದಂತಾಗಿದೆ. ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ದೇಸಿ ಶೈಲಿಯಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿರೀಕ್ಷೆಯಂತೆ ಶನಿವಾರ ಪ್ರಿಯಾಂಕ ಮನೆಯಲ್ಲಿ ಎಂಗೇಜ್ಮೆಂಟ್ ಕಾರ್ಯಕ್ರಮವು ನೆರವೇರಿದೆ.
ಬೆಳಿಗ್ಗೆ ಪ್ರಿಯಾಂಕ ಚೋಪ್ರಾ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆದಿದೆ. ಪೂಜೆಗೆ ಪ್ರಿಯಾಂಕ ಹಾಗೂ ನಿಕ್ ಕುಳಿತುಕೊಂಡಿದ್ದರು ಎನ್ನಲಾಗಿದೆ. ಪ್ರಿಯಾಂಕ ಮನೆಗೆ ಸಂಬಂಧಿಕರು, ಸ್ನೇಹಿತರು ಕೂಡ ಆಗಮಿಸಿದ್ದರು. ಮನೆಯನ್ನು ಹೂ ಮತ್ತು ಬಣ್ಣ ಬಣ್ಣದ ಲೈಟ್ ಗಳಿಂದ ಅಲಂಕರ ಮಾಡಲಾಗಿತ್ತು. ಶನಿವಾರ ಸಂಜೆ ಪ್ರಿಯಾಂಕ ಚೋಪ್ರಾ ಆಪ್ತರಿಗೆ ಅದ್ಧೂರಿ ಪಾರ್ಟಿಯನ್ನು ನೀಡಲಿದ್ದಾರೆ. ಪ್ರಿಯಾಂಕ ಹಾಗೂ ನಿಕ್ ದೇಶಿ ಉಡುಗೆಯಲ್ಲಿ ಮಿಂಚುತ್ತಿದ್ದಾರೆ.ಪ್ರಿಯಾಂಕ ತುಂಬಾ ಖುಷಿಯಾಗಿದ್ದಾಳೆ ಎಂದು ಹೇಳಲಾಗಿದೆ.
Comments