ಈ ವಿಷಯ ಕೇಳಿದ ತಕ್ಷಣ ನಕ್ಕು ನಕ್ಕು ಸುಸ್ತಾದ್ರಂತೆ ಕಿರಿಕ್ ಜೋಡಿ..!?

ಸ್ಯಾಂಡಲ್ ವುಡ್ ಮೂಲಕ ಗುರುತಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ನ ಗೀತಾ ಗೋವಿಂದಂ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇದರ ನಡುವೆ ರಶ್ಮಿಕಾ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಯೊಂದು ಅವರನ್ನು ಬೆಂಬಿಡದೆ ಕಾಡುತ್ತಲೆ ಇದೆ.
ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ನಡುವೆ ಬ್ರೇಕ್ ಅಪ್ ಆಗಿದೆ ಎಂಬ ರೂಮರ್ ಶುರುವಾಗಿದೆ. ಇದೀಗ ರಶ್ಮಿಕಾ ಆ ರೂಮರ್ಸ್ ಗಳಿಗೆಲ್ಲಾ ಬ್ರೇಕ್ ಹಾಕಿದ್ದಾರೆ. ತಮ್ಮಿಬ್ಬರ ಮಧ್ಯೆ ಬ್ರೇಕ್ ಅಪ್ ಆಗಿದೆ ಅನ್ನೋ ಸುದ್ದಿ ಕೇಳ್ತಿದ್ದ ಹಾಗೆ ರಕ್ಷಿತ್ ಶೆಟ್ಟಿ ನಕ್ಕು ನಕ್ಕು ಸುಸ್ತರಾದಂತೆ. ನಾವಿಬ್ಬರು ತುಂಬಾ ಖುಷಿಯಾಗಿದ್ದೇವೆ. ಇಬ್ಬರು ಒಟ್ಟಿಗೆ ತುಂಬಾ ಸಮಯ ಕಳೆಯೋಕೆ ಆಗ್ತಿಲ್ಲ. ಎಂಗೇಜ್ ಮೆಂಟ್ ಗೆ ಮೊದಲಿನಿಂದಲೂ ಎರಡು ವರ್ಷ ಮದುವೆ ಇಲ್ಲ ಅನ್ನೋ ಪ್ಲಾನ್ ಕೂಡ ಮಾಡಿಕೊಂಡಿದ್ದೆವು ಎಂದು ಹೇಳಿದ್ದಾರೆ. ಇಬ್ಬರು ಕೂಡ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದೇವೆ. ಅದರ ಹೊರತಾಗಿ ನಮ್ಮ ನಡುವೆ ಬ್ರೇಕ್ ಅಪ್ ಆಗಿದೆ ಅನ್ನೋದು ಕೇವಲ ಗಾಸಿಪ್ ಅಷ್ಟೇ ಎಂದಿದ್ದಾರೆ ಕಿರಿಕ್ ಜೋಡಿ.
Comments