'ದಿ ವಿಲನ್' ಹೊಸ ಪೋಸ್ಟರ್ ರಿಲೀಸ್..! ಹೇಗಿದೆ ಗೊತ್ತಾ ನ್ಯೂ ಪೋಸ್ಟರ್..?

ಸ್ಯಾಂಡಲ್ ವುಡ್ ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವ ಬಹು ನಿರೀಕ್ಷಿತ ಚಿತ್ರವಾದ 'ದಿ ವಿಲನ್' ಯಾವಾಗ ಬಿಡುಗಡೆ ಆಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಆದರೆ ಆಗಸ್ಟ್ 19 ರಂದು (ಭಾನುವಾರ) ಸಂಜೆ 5 ಗಂಟೆಗೆ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ವೈಟ್ ಆರ್ಕಿಡ್ ನಲ್ಲಿ 'ದಿ ವಿಲನ್' ಆಡಿಯೋ ರಿಲೀಸ್ ಸಮಾರಂಭ ಏರ್ಪಡಿಸಲಾಗಿದೆ. 'ದಿ ವಿಲನ್' ಚಿತ್ರದ ಹೊಚ್ಚ ಹೊಸ ಪೋಸ್ಟರ್ ಇದೀಗ ಬಿಡುಗಡೆ ಆಗಿದೆ. ಈ ಪೋಸ್ಟರ್ ನಲ್ಲಿ ಸುದೀಪ್, ಆಮಿ ಜಾಕ್ಸನ್ ಹಾಗೂ ಶಿವರಾಜ್ ಕುಮಾರ್...ಒಬ್ಬೊಬ್ಬರು ಒಂದೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ನಲ್ಲಿಯೇ ಕುತೂಹಲವನ್ನು ಕೆರಳಿಸಿರುವ ದಿ ವಿಲನ್ ತೆರೆ ಮೇಲೆ ಯಾವ ರೀತಿ ಮೂಡಿ ಬರುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.
Comments