21 ವರ್ಷಗಳ ಬಳಿಕ ಫಸ್ಟ್ ಟೈಮ್ ಅಣ್ಣನಿಗೆ ರಾಖಿ ಕಟ್ಟುತ್ತಿದ್ದಾಳೆ ಈ ನಟಿ
ಅಕ್ಕ ತಂಗಿಯರು , ಅಣ್ಣ ತಮ್ಮಂದಿರಿಗೆ ರಾಕಿ ಕಟ್ಟುವುದೆ ಒಂದು ರೀತಿಯ ಖುಷಿಯ ವಿಚಾರ. ಅದೇ ರೀತಿಯಾಗಿ ದಿವಂಗತ ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಕೂಡಾ ರಕ್ಷಾ ಬಂಧನವನ್ನು ಕಾಯುತ್ತಿದ್ದಾಳೆ.
21 ವರ್ಷಗಳ ಬಳಿಕ ಇದೇ ಫಸ್ಟ್ ಟೈಮ್ ಅಣ್ಣನಿಗೆ ಜಾಹ್ನವಿ ಕಪೂರ್ ರಾಖಿಯನ್ನು ಕಟ್ಟಲಿದ್ದಾಳೆ. ಧಡಕ್ ಚಿತ್ರದ ಮೂಲಕ ಸಖತ್ ಸೌಂಡ್ ಮಾಡ್ತಿರುವ ಜಾಹ್ನವಿ, ಸಹೋದರ ಹಾಗೂ ನಟ ಅರ್ಜುನ್ ಕಪೂರ್ ಗೆ ಹೆಚ್ಚು ಹತ್ತಿರವಾಗಿದ್ದಾಳೆ. ತುಂಬಾ ವರ್ಷಗಳಿಂದ ಜಾಹ್ನವಿ ಹಾಗೂ ಅರ್ಜುನ್ ಕಪೂರ್ ಕುಟುಂಬದಲ್ಲಿ ಕೆಲವೊಂದಿಷ್ಟು ಭಿನ್ನಾಭಿಪ್ರಾಯವಿತ್ತು. ಫೆಬ್ರವರಿ 24ರಂದು ನಟಿ ಶ್ರೀದೇವಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅರ್ಜುನ್ ಕಪೂರ್ ಬೋನಿ ಕಪೂರ್ ಮನೆಗೆ ಬಂದು ಜಾಹ್ನವಿಗೆ ಸಾಂತ್ವನ ಹೇಳಿದ್ದರು. ಅಲ್ಲಿಂದ ಜಾಹ್ನವಿ ಹಾಗೂ ಖುಷಿ ಕಪೂರ್ ಜೊತೆ ಅರ್ಜುನ್ ಸಾಕಷ್ಟು ಸಮಯವನ್ನು ಕಳೆದಿದ್ದಾರೆ. 21 ವರ್ಷಗಳ ಬಳಿಕ ರಾಖಿ ಕಟ್ಟುವ ಖುಷಿಯಲ್ಲಿದ್ದಾರೆ ಜಾಹ್ನವಿ ಕಪೂರ್
Comments