ನಯನಾಳಿಗಾಗಿ ಹೂ ಮಾರಿದ ಬೆಂಗಾಳಿ ಬೆಡಗಿ ಪ್ರಿಯಾಂಕ ಉಪೇಂದ್ರ
ಖಾಸಗಿ ವಾಹಿನಿಯಲ್ಲಿ ರಿಯಾಲಿಟಿ ಷೋಗಳಿಗೇನು ಕಡಿಮೆ ಎಲ್ಲ..ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಸದಾ ನಿಮ್ಮೊಂದಿಗೆ' ಶೋ, ಕಷ್ಟದಲ್ಲಿರುವ ಕುಟುಂಬಗಳಿಗೆ ಬೆಳಕನ್ನು ನೀಡುತ್ತಿದೆ
ಕಳೆದ ವಾರದ ಸಂಚಿಕೆಯಲ್ಲಿ ನಟ ಡಾಲಿ ಧನಂಜಯ್, ಮೀನುಗಾರರ ಕುಟುಂಬದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೂಸಂಬಿ ಜ್ಯೂಸ್ ಮಾರಿ 1.30 ಲಕ್ಷ ರೂ.ನೀಡಿ ನೆರವಾಗಿದ್ದರು. ಇದೀಗ ಪ್ರಿಯಾಂಕಾ ಉಪೆಂದ್ರ, ಹೃದಯ ಸಮಸ್ಯೆಯಿಂದ ಬಳಲುತ್ತಿರುವ ನಯನಾ ಎಂಬ ಬಾಲೆಯ ಬಾಳಿಗೆ ಬೆಳಕಾಗಲು ಹೊರಟಿದ್ದಾರೆ. ಬೆಂಗಾಲಿ ಬೆಡಗಿ ಪ್ರಿಯಾಂಕ ಉಪೇಂದ್ರ, ಪುಷ್ಪಲತಾ ಕುಟುಂಬಕ್ಕಾಗಿ ಗಾಂಧಿ ಬಜಾರ್ನಲ್ಲಿ ಹೂವಿನ ವ್ಯಾಪಾರವನ್ನು ಮಾಡಿದ್ದಾರೆ. ಪ್ರಿಯಾಂಕಾ ಭಾಗವಹಿಸಿದ "ಸದಾ ನಿಮ್ಮೊಂದಿಗೆ" ಸಂಚಿಗೆ ಇದೇ ಭಾನುವಾರ ಉದಯ ವಾಹಿನಿಯಲ್ಲಿ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.
Comments