ಆಸ್ಪತ್ರೆ ಸೇರಿದ ಹೆಬ್ಬುಲಿ ನಾಯಕಿ ಅಮಲಾಪೌಲ್

ಸ್ಯಾಂಡಲ್ ವುಡ್ ನಲ್ಲಿ ಹೆಬ್ಬುಲಿ ಚಿತ್ರದ ಮೂಲಕ ಅಭಿಮಾನಿಗಳ ಮನಸನ್ನ ಗೆದ್ದಿದ್ದ ನಟಿ ಅಮಲಾಪೌಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಭಿನಯ ಚಕ್ರವರ್ತಿ ಸುದೀಪ್ ಜೊತೆ ಹೆಬ್ಬುಲಿ ಚಿತ್ರದಲ್ಲಿ ನಟಿಸಿದ ನಟಿ ಅಮಲಾ ಪೌಲ್ ಅವರು ಚಿತ್ರದ ಶೂಟಿಂಗ್ ಒಂದರಲ್ಲಿ ಸ್ಟಂಟ್ ಮಾಡುವ ಸಂದರ್ಭದಲ್ಲಿ ತಮ್ಮ ಬಲಗೈಗೆ ಏಟುಮಾಡಿಕೊಂಡಿದ್ದಾರೆ.
'ಅಧೋ ಅಂಧ ಪರವೈ ಪೊಲಾ' ಚಿತ್ರದಲ್ಲಿ ಅಮಲಾ ಪೌಲ್ ಅಭಿನಯಿಸುತ್ತಿದ್ದು, ಈ ಚಿತ್ರಕ್ಕಾಗಿ ಕಳೆದ ಶನಿವಾರ ರಾತ್ರಿ ಸ್ಟಂಟ್ ಸನ್ನಿವೇಶಗಳಲ್ಲಿ ನಟಿ ಅಮಲಾ ಪೌಲ್ ಪಾಲ್ಗೊಂಡಿದ್ದರು. ಆಗ ಸ್ಟಂಟ್ ಮಾಡುವ ಸಂದರ್ಭದಲ್ಲಿ ನಟಿ ಅಮಲಾ ಬಲಗೈ ಮುರಿದಿದೆ. ನೋವು ಹೆಚ್ಚಾದ ಕಾರಣ ತಕ್ಷಣ ಶೂಟಿಂಗ್ ನಿಲ್ಲಿಸಿ ಚಿಕಿತ್ಸೆಗಾಗಿ ಕೊಚ್ಚಿಗೆ ಹೋಗಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷೆ ಮಾಡಿ ಕೈ ಮುರಿದಿದೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಅಮಲಾ ಪೌಲ್ ಕೊಚ್ಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರವನ್ನು ಅಮಲಾ ಪೌಲ್ ಅವರು ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ
Comments